ಟಿ20 ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ಬೌಂಡರಿ ಗಳಿಸಿ ದಾಖಲೆ ಮುರಿದ ರೋಹಿತ್

ರೋಹಿತ್ ಶರ್ಮಾ | PTI
ಗಯಾನ : ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಬೌಂಡರಿಗಳನ್ನು ಗಳಿಸಿ ದಾಖಲೆಯೊಂದನ್ನು ಮುರಿದರು.
ಇಂಗ್ಲೆಂಡ್ ವಿರುದ್ಧ ಗುರುವಾರ ನಡೆದ ಟಿ20 ವಿಶ್ವಕಪ್ ಸೆಮಿ ಫೈನಲ್ ಪಂದ್ಯದ ವೇಳೆ ರೋಹಿತ್ ಈ ಸಾಧನೆ ಮಾಡಿದರು. ಈ ವೇಳೆ ಅವರು ಶ್ರೀಲಂಕಾದ ಮಾಜಿ ನಾಯಕ ಮಹೇಲ ಜಯವರ್ಧನೆ (111 ಬೌಂಡರಿ) ಅವರ ದಾಖಲೆಯನ್ನು ಮುರಿದರು. ಲೆಗ್ ಸ್ಪಿನ್ನರ್ ರಶೀದ್ ಬೌಲಿಂಗ್ ನಲ್ಲಿ ರಿವರ್ಸ್ ಸ್ವೀಪ್ ನಲ್ಲಿ ಬೌಂಡರಿ ಗಳಿಸಿ ಈ ಸಾಧನೆ ಮಾಡಿದರು.
37ರ ಹರೆಯದ ರೋಹಿತ್ ಪಂದ್ಯಾವಳಿಯ ಇತಿಹಾಸದಲ್ಲಿ ವೆಸ್ಟ್ಇಂಡೀಸ್ ನ ಕ್ರಿಸ್ ಗೇಲ್ ನಂತರ ಗರಿಷ್ಠ ಸಿಕ್ಸರ್ ಸಿಡಿಸಿದ ಎರಡನೇ ಬ್ಯಾಟರ್ ಆಗಿದ್ದಾರೆ.
ಟಿ20 ವಿಶ್ವಕಪ್ ನಲ್ಲಿ ಗರಿಷ್ಠ ಬೌಂಡರಿ ಗಳಿಸಿದ ಬ್ಯಾಟರ್ ಗಳು
ರೋಹಿತ್ ಶರ್ಮಾ(ಭಾರತ)-43 ಇನಿಂಗ್ಸ್ಗಳಲ್ಲಿ 113 ಬೌಂಡರಿ
ಮಹೇಲ ಜಯವರ್ಧನೆ(ಶ್ರೀಲಂಕಾ)-31 ಇನಿಂಗ್ಸ್ಗಳಲ್ಲಿ 111 ಬೌಂಡರಿ
ವಿರಾಟ್ ಕೊಹ್ಲಿ(ಭಾರತ)-32 ಇನಿಂಗ್ಸ್ಗಳಲ್ಲಿ 105 ಬೌಂಡರಿ
ಡೇವಿಡ್ ವಾರ್ನರ್(ಆಸ್ಟ್ರೇಲಿಯ)-41 ಇನಿಂಗ್ಸ್ಗಳಲ್ಲಿ 103 ಬೌಂಡರಿ
ತಿಲಕರತ್ನೆ ದಿಲ್ಶನ್(ಶ್ರೀಲಂಕಾ)-34 ಇನಿಂಗ್ಸ್ಗಳಲ್ಲಿ 101 ಬೌಂಡರಿ







