Australian Open | ಸನೀತ್ ದಯಾನಂದ್ ಪ್ರಧಾನ ಸುತ್ತಿಗೆ ತೇರ್ಗಡೆ

ಸನೀತ್ ದಯಾನಂದ್ | Photo Credit : PTI
ಸಿಡ್ನಿ, ಜೂ.9: ಭಾರತದ ಸನೀತ್ ದಯಾನಂದ್ ತಾನಾಡಿದ ಅರ್ಹತಾ ಪಂದ್ಯಗಳನ್ನು ಗೆದ್ದ ನಂತರ ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮಂಗಳವಾರ ಪ್ರಧಾನ ಸುತ್ತಿಗೆ ತೇರ್ಗಡೆಯಾಗಿದ್ದಾರೆ.
ನಾಲ್ಕನೇ ಶ್ರೇಯಾಂಕದ ದಯಾನಂದ್ ಅರ್ಹತಾ ಸುತ್ತುಗಳಲ್ಲಿ ಮೊದಲಿಗೆ ಸ್ಥಳೀಯ ಆಟಗಾರ ಕರೊನೊರನ್ನು 21-17, 21-15 ಗೇಮ್ಗಳ ಅಂತರದಿಂದ ಮಣಿಸಿದರು. ಆ ನಂತರ ಮಲೇಶ್ಯದ ಮಿಂಗ್ ಹಾಂಗ್ ಲಿಮ್ ವಿರುದ್ಧ 21-9, 21-16 ಗೇಮ್ ಗಳ ಅಂತರದಿಂದ ಜಯಶಾಲಿಯಾದರು.
ದಯಾನಂದ್ ಪ್ರಧಾನ ಸುತ್ತಿನ ಮೊದಲ ಪಂದ್ಯದಲ್ಲಿ ಚೀನಾದ ಹು ಝಿ ಆನ್ರನ್ನು ಎದುರಿಸಲಿದ್ದಾರೆ.
ಆದರೆ, ಮನ್ರಾಜ್ ಸಿಂಗ್ ತನ್ನ ಎರಡನೇ ಅರ್ಹತಾ ಪಂದ್ಯದಲ್ಲಿ ಮಲೇಶ್ಯದ ಎಯೊಜಿನ್ ಎವ್ ವಿರುದ್ಧ 11-21, 18-21 ಅಂತರದಿಂದ ಸೋಲನುಭವಿಸಿ ಟೂರ್ನಿಯಿಂದ ಹೊರಗುಳಿದರು.
ಪಂದ್ಯಾವಳಿಯ ಪ್ರಧಾನ ಸಿಂಗಲ್ಸ್ ಸ್ಪರ್ಧೆಯು ಬುಧವಾರ ಆರಂಭವಾಗಲಿದೆ. ಭಾರತದ ಸವಾಲನ್ನು ಪಿ.ವಿ. ಸಿಂಧು ಮುನ್ನಡೆಸಲಿದ್ದಾರೆ.
Next Story




