ಇಂಗ್ಲೆಂಡ್ ಪರ 100 ಪಂದ್ಯ ಆಡಿದ 17ನೇ ಕ್ರಿಕೆಟಿಗ ಬೈರ್ಸ್ಟೋವ್

ಜಾನಿ ಬೈರ್ಸ್ಟೋವ್ | Photo: NDTV
ಧರ್ಮಶಾಲಾ: ಭಾರತ ವಿರುದ್ಧ ಗುರುವಾರ ಎಚ್ ಪಿ ಸಿ ಎ ಕ್ರೀಡಾಂಗಣದಲ್ಲಿ ಆರಂಭವಾದ ಐದನೇ ಟೆಸ್ಟ್ ಪಂದ್ಯದಲ್ಲಿ ಜಾನಿ ಬೈರ್ಸ್ಟೋವ್ 100 ಟೆಸ್ಟ್ ಪಂದ್ಯಗಳ ಮೈಲಿಗಲ್ಲು ತಲುಪಿದ ಇಂಗ್ಲೆಂಡ್ ನ 17ನೇ ಆಟಗಾರ ಎನಿಸಿಕೊಂಡರು.
ಬೈರ್ಸ್ಟೋವ್ 2012ರಲ್ಲಿ ಲಾರ್ಡ್ಸ್ನಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಇಂಗ್ಲೆಂಡ್ ಪರ ಚೊಚ್ಚಲ ಟೆಸ್ಟ್ ಪಂದ್ಯ ಆಡಿದ್ದರು. ತನ್ನ ಮೊದಲ ಇನಿಂಗ್ಸ್ ನಲ್ಲಿ 16 ರನ್ ಗಳಿಸಿದ್ದರು. ಎರಡನೇ ಇನಿಂಗ್ಸ್ ನಲ್ಲಿ ಔಟಾಗದೆ ಉಳಿದಿದ್ದರು. ಆ ಪಂದ್ಯವನ್ನು ಇಂಗ್ಲೆಂಡ್ 5 ವಿಕೆಟ್ ಗಳಿಂದ ಗೆದ್ದುಕೊಂಡಿತ್ತು.
34ರ ಹರೆಯದ ಬೈರ್ಸ್ಟೋವ್ 36.42ರ ಸರಾಸರಿಯಲ್ಲಿ 12 ಶತಕ ಹಾಗೂ 26 ಅರ್ಧಶತಕಗಳ ಸಹಿತ ಒಟ್ಟು 5,974 ರನ್ ಗಳಿಸಿದ್ದಾರೆ.
ಮಧ್ಯಮ ಸರದಿಯ ಬ್ಯಾಟರ್ ಬೈರ್ಸ್ಟೋವ್ ಪ್ರಸಕ್ತ ಟೆಸ್ಟ್ ಸರಣಿಯಲ್ಲಿ 4 ಟೆಸ್ಟ್ ಪಂದ್ಯಗಳನ್ನು ಆಡಿದ್ದು 38 ರನ್ ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ.
*100 ಪಂದ್ಯಗಳನ್ನಾಡಿದ ಇಂಗ್ಲೆಂಡ್ ಆಟಗಾರರ ಪಟ್ಟಿ
ಜೇಮ್ಸ್ ಆ್ಯಂಡರ್ಸನ್-187
ಸ್ಟುವರ್ಟ್ ಬ್ರಾಡ್-167
ಅಲಸ್ಟೈರ್ ಕುಕ್-161
ಜೋ ರೂಟ್-140
ಅಲೆಕ್ ಸ್ಟೀವರ್ಟ್-133
ಇಯಾನ್ ಬೆಲ್-118
ಗ್ರಹಾಂ ಗೂಚ್-118
ಡೇವಿಡ್ ಗೊವೆರ್-117
ಮೈಕಲ್ ಅಥರ್ಟನ್-115
ಕಾಲಿನ್ ಕೌಡ್ರೆ-114
ಜೆಫ್ರಿ ಬಾಯ್ಕಾಟ್-108
ಕೆವಿನ್ ಪೀಟರ್ಸನ್-104
ಇಯಾನ್ ಬೋಥಂ-102
ಬೆನ್ ಸ್ಟೋಕ್ಸ್-102
ಆ್ಯಂಡ್ರೆ ಸ್ಟ್ರಾಸ್-100
ಗ್ರಹಾಂ ಥೋರ್ಪೆ-100
ಜಾನಿ ಬೈರ್ಸ್ಟೋವ್-100







