ಡಬ್ಲ್ಯುಪಿಸಿ ಇಂಡಿಯಾ ನ್ಯಾಶನಲ್ ಚಾಂಪಿಯನ್ ಶಿಪ್ | ಭಾರತಕ್ಕೆ ಮೂರು ಚಿನ್ನದ ಪದಕ ಗೆದ್ದುಕೊಟ್ಟ ಬಿದಾನ್

Photo:citytoday.media
ಬೆಂಗಳೂರು : ಡಬ್ಲ್ಯುಪಿಸಿ ಇಂಡಿಯಾ ನ್ಯಾಶನಲ್ ಚಾಂಪಿಯನ್ ಶಿಪ್-2023ರಲ್ಲಿ ಬಿದಾನ್ ಭಾರತಕ್ಕೆ ಮೂರು ಚಿನ್ನದ ಪದಕಗಳನ್ನು ಗೆದ್ದುಕೊಟ್ಟಿದ್ದಾರೆ.
ಗುರುವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿದಾನ್ ಅವರ ತಂದೆ ಅರುಣ್, ’20 ವರ್ಷದ ಬಿದಾನ್ ಜನವರಿ 2023ರ ಆರಂಭದಲ್ಲಿ ಪವರ್ ಲಿಫ್ಟಿಂಗ್ ಕ್ರೀಡೆಯಲ್ಲಿ ತರಬೇತಿ ಆರಂಭಿಸಿದ್ದ. ಕರ್ನಾಟಕದಲ್ಲಿ ನಡೆಯುವ ಮುಕ್ತ ರಾಜ್ಯ ಚಾಂಪಿಯನ್ ಶಿಪ್ ಗಾಗಿ ಕಠಿಣ ಅಭ್ಯಾಸ ಮಾಡಿ 19ಯು ಯು 100ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಮೊದಲ ಸ್ಥಾನ ಪಡೆದುಕೊಂಡಿದ್ದ ಎಂದು ಹೇಳಿದರು.
ನೇರವಾಗಿ ಕಿರ್ಗಿಸ್ತಾನ್ ಗೆ ಹೋಗಲು ಅರ್ಹತೆ ಪಡೆದ ಬಿದಾನ್, ಮಾ.8 ಹಾಗೂ 10 ನಡುವೆ ಕಿರ್ಗಿಸ್ತಾನ್ ನಲ್ಲಿ ನಡೆದ ಏಶ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪತ್ರಿನಿಧಿಸಿ 3 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ ಎಂದು ಅರುಣ್ ತಿಳಿಸಿದರು.
Next Story





