ಭಾರತ ನಂಬರ್ ಒನ್ ತಂಡ; ಆದರೆ.. : ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಾಸಿತ್ ಅಲಿ ಹೇಳಿದ್ದೇನು?

PC: x.com/Rizwan_pti_ik
ದುಬೈ: ವಿವಾದಗಳಿಂದ ಹೆಸರು ಮಾಡಿದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಪ್ರದಾನ ಸಮಾರಂಭ ಹಲವು ನಾಟಕೀಯ ಘಟನೆಗಳಿಗೆ ಸಾಕ್ಷಿಯಾದ ಬೆನ್ನಲ್ಲೇ, ಪಾಕಿಸ್ತಾನದ ಮಾಜಿ ಕ್ರಿಕೆಟರ್ ಬಾಸಿತ್ ಅಲಿ ಹೇಳಿಕೆ ನೀಡಿ, "ಭಾರತ ನಂಬರ್ ಒನ್ ತಂಡವೇನೋ ಹೌದು; ಆದರೆ ಅವರ ನಡವಳಿಕೆ ಮಾತ್ರ ಥರ್ಡ್ರೇಟ್" ಎಂದು ಮತ್ತೆ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬಹಿಷ್ಕರಿಸಿದ ಭಾರತದ ಕ್ರಮವನ್ನು ತೀವ್ರವಾಗಿ ಆಕ್ಷೇಪಿಸಿರುವ ಅವರು, ಟ್ರೋಫಿಯೊಂದಿಗೆ ಹೊರ ನಡೆದ ಪಿಸಿಬಿ ಅಧ್ಯಕ್ಷರ ಕ್ರಮವನ್ನು ಬೆಂಬಲಿಸಿದ್ದಾರೆ.
ಏಷ್ಯನ್ ಕ್ರಿಕೆಟ್ ಮಂಡಳಿ ಅಧ್ಯಕ್ಷರೂ ಆಗಿರುವ ನಖ್ವಿ ಪ್ರಶಸ್ತಿ ಪ್ರದಾನ ಮಾಡುವುದಾದರೆ ಸಮಾರಂಭವನ್ನು ಬಹಿಷ್ಕರಿಸುವುದಾಗಿ ಭಾರತ ಹೇಳಿಕೆ ನೀಡಿತ್ತು. ಇದರಿಂದ ಕುಪಿತರಾದ ನಖ್ವಿ ಟ್ರೋಫಿಯೊಂದಿಗೆ ವೇದಿಕೆಯಿಂದ ಹೊರ ನಡೆದಿದ್ದರು.
"ಭಾರತ ನಂ. 1 ತಂಡ. ಆದರೆ ಅವರ ಕ್ರಮ ಮಾತ್ರ ಥರ್ಡ್ ರೇಟ್. ನಖ್ವಿ ನೀಡುವ ಟ್ರೋಫಿಯನ್ನು ಅವರು ಸ್ವೀಕರಿಸುವುದಿಲ್ಲ ಎಂದಾದಲ್ಲಿ, ವಿಶ್ವದ ಕಣ್ಣಿಗೆ ಅವಮಾನಕರ. ಟ್ರೋಫಿಯನ್ನು ಹಸ್ತಾಂತರಿಸಬಾರದಿತ್ತು: ಎಂದು ಪಾಕಿಸ್ತಾನದ ಆ್ಯರಿನ್ಯೂಸ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.







