ಮುಂಬೈ ರಣಜಿ ತಂಡ ಪ್ರಕಟ : ಪೃಥ್ವಿ ಶಾಗೆ ಸ್ಥಾನವಿಲ್ಲ, ಮೊದಲೆರಡು ಪಂದ್ಯಕ್ಕೆ ರಹಾನೆ ನಾಯಕ

ಅಜಿಂಕ್ಯ ರಹಾನೆ | Photo: PTI
ಹೊಸದಿಲ್ಲಿ : ಬಿಹಾರ ಹಾಗೂ ಆಂಧ್ರ ತಂಡದ ವಿರುದ್ಧದ ರಣಜಿ ಟ್ರೋಫಿಯ ಮೊದಲೆರಡು ಪಂದ್ಯಗಳಿಗೆ ಸೋಮವಾರ 15 ಸದಸ್ಯರುಗಳನ್ನು ಒಳಗೊಂಡ ಮುಂಬೈ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ.
ಅಜಿಂಕ್ಯ ರಹಾನೆ ಎರಡನೇ ರಣಜಿ ಋತುವಿನಲ್ಲೂ ಮುಂಬೈ ತಂಡದ ನಾಯಕತ್ವ ವಹಿಸಲಿದ್ದು, 2023ರಲ್ಲಿ ಎಲೈಟ್ ಗ್ರೂಪ್ ಬಿಯಲ್ಲಿ 4ನೇ ಸ್ಥಾನ ಪಡೆದಿತ್ತು. ನಾಕೌಟ್ ಗೆ ತೇರ್ಗಡೆಯಾಗುವಲ್ಲಿ ವಿಫಲವಾಗಿತ್ತು.
ಕಳೆದ ಋತುವಿನಲ್ಲಿ ಮುಂಬೈ ಅನ್ನು ಪ್ರತಿನಿಧಿಸಿದ್ದ ಆಟಗಾರರಾಗಿರುವ ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್ ಹಾಗೂ ಪೃಥ್ವಿ ಶಾ ಅವರನ್ನು ತಂಡದಿಂದ ಕೈಬಿಡಲಾಗಿದೆ.
ಮುಂಬೈ ತಂಡ ಜನವರಿ 5ರಂದು ಬಿಹಾರವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಜನವರಿ 12ರಿಂದ 15ರ ತನಕ ಆಂಧ್ರ ತಂಡವನ್ನು ಎದುರಿಸಲಿದೆ.
*ಮುಂಬೈ ತಂಡ
ಅಜಿಂಕ್ಯ ರಹಾನೆ(ನಾಯಕ), ಜಯ್ ಬಿಶ್ತ್, ಭೂಪೇನ್ ಲಾಲ್ವಾನಿ, ಹಾರ್ದಿಕ್ ತಮೋರೆ, ಸರ್ಫರಾಝ್ ಖಾನ್, ಶಿವಂ ದುಬೆ, ಸುವೇದ್ ಪಾರ್ಕರ್, ಪ್ರಸಾದ್ ಪವಾರ್, ಶಮ್ಸ್ ಮುಲಾನಿ, ತನುಶ್ ಕೋಟ್ಯಾನ್, ತುಷಾರ್ ದೇಶಪಾಂಡೆ, ಮೋಹಿತ್ ಅವಸ್ಥಿ, ಧವಳ್ ಕುಲಕರ್ಣಿ, ರಾಯ್ಸ್ಟನ್ ಡಾಯಸ್, ಅಥರ್ವ ಅಂಕೋಲೇಕರ್







