ಪಾಕಿಸ್ತಾನಕ್ಕಿಂತ ಅಫ್ಘಾನಿಸ್ತಾನವೇ ಉತ್ತಮ: ಶುಐಬ್ ಮಲಿಕ್

Photo:X
ಕರಾಚಿ : ಈಗ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನದ ಆಟಗಾರರು ಪಾಕಿಸ್ತಾನಕ್ಕಿಂತ ಉತ್ತಮ ಕ್ರಿಕೆಟ್ ಆಡಿದ್ದಾರೆ ಎಂದು ಪಾಕ್ ತಂಡದ ಮಾಜಿ ನಾಯಕ ಶುಐಬ್ ಮಲಿಕ್ ಅಭಿಪ್ರಾಯಪಟ್ಟಿದ್ದಾರೆ.
ಎ ಸ್ಪೋರ್ಟ್ಸ್ನೊಂದಿಗೆ ಮಾತನಾಡಿದ ಮಲಿಕ್, 2023ರ ವಿಶ್ವಕಪ್ನಲ್ಲಿ ಪಾಕಿಸ್ತಾನಕ್ಕಿಂತ ಅಫ್ಘಾನಿಸ್ತಾನವೇ ಚೆನ್ನಾಗಿ ಆಡಿದೆ. ಪಾಕಿಸ್ತಾನ ಹಾಗೂ ಅಫ್ಘಾನ್ ತಲಾ 4 ಪಂದ್ಯಗಳನ್ನು ಗೆದ್ದುಕೊಂಡಿವೆ ಎಂದರು.
ವೇಗದ ಬೌಲರ್ ವಸೀಂ ಅಕ್ರಂ ಅವರು ಮಲಿಕ್ ಮಾತನ್ನು ಒಪ್ಪಿಕೊಂಡಿದ್ದಾರೆ.
ನಿರಂತರ ಕ್ರಿಕೆಟ್ ಆಡುತ್ತಿರುವ ಪಾಕ್ ತಂಡ ದಣಿದಂತೆ ಕಂಡುಬಂದಿದೆ. ಈ ವಿಶ್ವಕಪ್ನಲ್ಲಿ ಅದು ಭಾರತ, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ ಹಾಗೂ ಆಸ್ಟ್ರೇಲಿಯ ವಿರುದ್ಧ ಸೋತಿದೆ. ಅಫ್ಘಾನ್ ಬಲಿಷ್ಠ ತಂಡವಾಗಿ ಕಾಣುತ್ತಿದೆ. ಅಫ್ಘಾನ್ ಕ್ರಿಕೆಟಿಗರು ಪಾಕಿಸ್ತಾನಕ್ಕಿಂತ ಉತ್ತಮವಾಗಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ ಎಂದರು
Next Story





