ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ದಕ್ಷಿಣ ಆಫ್ರಿಕಾದ ವೇಗಿ ಅನ್ರಿಚ್ ನೋರ್ಟ್ಜೆ ಸೇರ್ಪಡೆ

File image of Anrich Nortje
ಹೊಸದಿಲ್ಲಿ, ಮಾ.25: ದಕ್ಷಿಣ ಆಫ್ರಿಕಾದ ಸ್ಟಾರ್ ವೇಗದ ಬೌಲರ್ ಅನ್ರಿಚ್ ನೋರ್ಟ್ಜೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಮವಾರ ಸೇರ್ಪಡೆಯಾಗಿದ್ದಾರೆ.
ಡೆಲ್ಲಿ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಟೂರ್ನಮೆಂಟ್ನಲ್ಲಿ ತಾನಾಡಿದ ಮೊದಲ ಪಂದ್ಯದಲ್ಲಿ 4 ವಿಕೆಟ್ನಿಂದ ಸೋತಿತ್ತು. ಇದೀಗ ನೋರ್ಟ್ಜೆ ಡೆಲ್ಲಿ ತಂಡವನ್ನು ಸೇರಿದ್ದಾರೆ.
ಡೆಲ್ಲಿ ಮೂಲದ ಫ್ರಾಂಚೈಸಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ 30ರ ಹರೆಯದ ನೋರ್ಟ್ಜೆ ತಂಡವನ್ನು ಸೇರಿದ ವೀಡಿಯೊವನ್ನು ಹಂಚಿಕೊಂಡಿದೆ.
ಪಂಜಾಬ್ ವಿರುದ್ಧ ಮೊದಲ ಪಂದ್ಯದಲ್ಲಿ ಡೇವಿಡ್ ವಾರ್ನರ್(29) ಹಾಗೂ ಮಿಚೆಲ್ ಮಾರ್ಷ್(20 ರನ್)ಡೆಲ್ಲಿಗೆ ಉತ್ತಮ ಆರಂಭ ಒದಗಿಸಿದ್ದರು. ರಿಷಭ್ಪಂತ್ ತನ್ನ ಪುನರಾಗಮನ ಪಂದ್ಯದಲ್ಲಿ 13 ಎಸೆತಗಳಲ್ಲಿ ಕೇವಲ 18 ರನ್ ಗಳಿಸಿ ಔಟಾದರು. ಡೆಲ್ಲಿ ಒಂದು ಹಂತದಲ್ಲಿ 147 ರನ್ಗೆ 8 ವಿಕೆಟ್ ಕಳೆದುಕೊಂಡಿತ್ತು. ಅಭಿಷೇಕ್ ಪೊರೆಲ್(32 ರನ್, 10 ಎಸೆತ)ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ ಡೆಲ್ಲಿ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತ್ತು.
ಪಂಜಾಬ್ ಪರ ಅರ್ಷದೀಪ್ ಸಿಂಗ್(2-28) ಹಾಗೂ ಹರ್ಷಲ್ ಪಟೆಲ್(2-43)ತಲಾ ಎರಡು ವಿಕೆಟ್ಗಳನ್ನು ಕಬಳಿಸಿದರು.
175 ರನ್ ಚೇಸ್ ಮಾಡಿದ ಪಂಜಾಬ್ ತಂಡವನ್ನು ಐದನೇ ವಿಕೆಟ್ಗೆ 67 ರನ್ ಜೊತೆಯಾಟ ನಡೆಸಿದ ಸ್ಯಾಮ್ ಕರ್ರನ್(63 ರನ್) ಹಾಗೂ ಲಿಯಾಮ್ ಲಿವಿಂಗ್ಸ್ಟೋನ್(38)ಗೆಲುವಿನ ದಡ ಸೇರಿಸಿದರು.
ಡೆಲ್ಲಿ ಪರ ಕುಲದೀಪ್ ಯಾದವ್(2-20) ಹಾಗೂ ಖಲೀಲ್ ಅಹ್ಮದ್(2-43) ತಲಾ ಎರಡು ವಿಕೆಟ್ ಪಡೆದರು. ಕರ್ರನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
Everything moved a little today
— Delhi Capitals (@DelhiCapitals) March 25, 2024
Welcome , . #YehHaiNayiDilli pic.twitter.com/me5uirhY30







