ಈ ವರ್ಷಾಂತ್ಯಕ್ಕೆ ಮಾಜಿ ಯುಎಸ್ ಓಪನ್ ಚಾಂಪಿಯನ್ ಡೊಮಿನಿಕ್ ಥೀಮ್ ನಿವೃತ್ತಿ

PC : X/@rolandgarros
·
ಚೆನ್ನೈ: ಈ ಋತುವಿನ ಅಂತ್ಯಕ್ಕೆ ನಾನು ನಿವೃತ್ತಿಯಾಗುವೆ ಎಂದು ಆಸ್ಟ್ರೇಲಿಯದ ಟೆನಿಸ್ ಆಟಗಾರ ಡೊಮಿನಿಕ್ ಥೀಮ್ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ.
ತನ್ನನ್ನು ಕಾಡುತ್ತಿರುವ ಮಣಿಕಟ್ಟು ಗಾಯವು ಈ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿದೆ ಎಂದು 2020ರಲ್ಲಿ ಯುಎಸ್ ಓಪನ್ನಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದ 30ರ ಹರೆಯದ ಥೀಮ್ ಹೇಳಿದ್ದಾರೆ.
ನಾನು ದೀರ್ಘ ಸಮಯದಿಂದ ನಿವೃತ್ತಿಯ ನಿರ್ಧಾರದ ಬಗ್ಗೆ ಯೋಚಿಸುತ್ತಿದ್ದೆ. ಎಚ್ಚರಿಕೆಯಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ. ನಾನು ನನ್ನ ಇಡೀ ಟೆನಿಸ್ ಪ್ರಯಾಣವನ್ನು ನೆನಪಿಸಿಕೊಂಡಿದ್ದು, ಇದು ಅಮೋಘವಾಗಿತ್ತು. ನಾನು ಕನಸಲ್ಲೂ ಯೋಚಿಸದ ಯಶಸ್ಸು ಹಾಗೂ ಟ್ರೋಫಿಗಳನ್ನು ಜಯಿಸಿದ್ದೇನೆ. ನಿವೃತ್ತಿಯ ನಿರ್ಧಾರದಿಂದ ನನಗೆ ಖುಷಿಯಾಗಿದೆ ಎಂದು ಥೀಮ್ ಹೇಳಿದ್ದಾರೆ.
ಥೀಮ್ ವೃತ್ತಿಜೀವನದಲ್ಲಿ 17 ಪ್ರಶಸ್ತಿಗಳನ್ನು ಜಯಿಸಿದ್ದಾರೆ. 2020ರಲ್ಲಿ ಯುಎಸ್ ಓಪನ್ ಪ್ರಶಸ್ತಿ ಜಯಿಸಿದ್ದರು. 2020ರ ಮಾರ್ಚ್ನಲ್ಲಿ 3ನೇ ರ್ಯಾಂಕ್ ತಲುಪಿ ಜೀವನಶ್ರೇಷ್ಠ ಸಾಧನೆ ಮಾಡಿದ್ದರು. ಸದ್ಯ 117ನೇ ರ್ಯಾಂಕ್ ನಲ್ಲಿದ್ದಾರೆ.
ಥೀಮ್ 2017ರಲ್ಲಿ ಆಸ್ಟ್ರೇಲಿಯನ್ ಓಪನ್ನಲ್ಲಿ ಫೈನಲ್ಗೆ ತಲುಪಿದ್ದರು. 2018 ಹಾಗೂ 2019ರಲ್ಲಿ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಫೈನಲ್ಗೆ ಪ್ರವೇಶಿಸಿದ್ದರು. ವರ್ಷದ 8 ಶ್ರೇಷ್ಠ ಆಟಗಾರರನ್ನು ಒಟ್ಟುಗೂಡಿಸುವ ಲಂಡನ್ನಲ್ಲಿ ನಡೆದ ಎರಡು ಎಟಿಪಿ ಫೈನಲ್ಗಳಲ್ಲಿ ಕೂಡ ಥೀಮ್ ಸ್ಪರ್ಧಿಸಿದ್ದರು.







