ಒಲಿಂಪಿಕ್ಸ್ ಶೂಟಿಂಗ್ | ಮಹೇಶ್ವರಿ ಚೌಹಾಣ್ಗೆ 8ನೇ ಸ್ಥಾನ

ಮಹೇಶ್ವರಿ ಚೌಹಾಣ್ | PC : PTI
ಪ್ಯಾರಿಸ್ : ಭಾರತೀಯ ಶೂಟರ್ ಮಹೇಶ್ವರಿ ಚೌಹಾಣ್ ಮಹಿಳೆಯರ ಸ್ಕೀಟ್ ಅರ್ಹತಾ ಸುತ್ತಿನ ಮೊದಲ ದಿನವಾದ ಶನಿವಾರ ಒಟ್ಟು 71 ಅಂಕ ಗಳಿಸಿ 8ನೇ ಸ್ಥಾನ ಗಳಿಸಿದ್ದಾರೆ.
ಇದೇ ವೇಳೆ ಇನ್ನೋರ್ವ ಶೂಟರ್ ರೈಝಾ ದಿಲ್ಲೋನ್ ಒಟ್ಟು 66 ಅಂಕದೊಂದಿಗೆ 25ನೇ ಸ್ಥಾನ ಪಡೆದಿದ್ದಾರೆ.
ಇನ್ನೂ ಎರಡು ಅರ್ಹತಾ ಸುತ್ತುಗಳು ರವಿವಾರ ನಡೆಯಲಿದೆ. ಅಗ್ರ-6 ಶೂಟರ್ಗಳು ಫೈನಲ್ನಲ್ಲಿ ಸ್ಪರ್ಧಿಸಲು ಅರ್ಹತೆ ಪಡೆಯಲಿದ್ದಾರೆ.
ಪುರುಷ ಸ್ಕೀಟ್ ಅರ್ಹತಾ ಸುತ್ತಿನ 2ನೇ ದಿನವಾದ ಶನಿವಾರ 24ನೇ ಸ್ಥಾನ ಪಡೆದಿರುವ ಭಾರತದ ಅನಂತ್ ಜೀತ್ ಸಿಂಗ್ ನರುಕಾ ಫೈನಲ್ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.
Next Story





