ಪ್ಯಾರಿಸ್ ಒಲಿಂಪಿಕ್ಸ್: ಪುರುಷರ ಟ್ರ್ಯಾಪ್ ಕ್ವಾಲಿಫಿಕೇಶನ್ನಲ್ಲಿ ಭಾರತದ ಪೃಥ್ವಿರಾಜ್ಗೆ ಕೊನೆಯ ಸ್ಥಾನ

ಪೃಥ್ವಿರಾಜ್ | PC : Paris Olympics.com
ಪ್ಯಾರಿಸ್, ಜು.29: ಭಾರತದ ಪೃಥ್ವಿರಾಜ್ ಟೊಂಡೈಮನ್ ಅವರು ಸೋಮವಾರ ಪುರುಷರ ಟ್ರ್ಯಾಪ್ ಕ್ವಾಲಿಫಿಕೇಶನ್ನಲ್ಲಿ ಕೊನೆಯ ಸ್ಥಾನ(30) ಪಡೆದಿದ್ದಾರೆ.
ಟ್ರ್ಯಾಪ್ ಇವೆಂಟ್ನ ಮೊದಲ ದಿನದ ಅರ್ಹತಾ ಪಂದ್ಯದಲ್ಲಿ ಮೂರು ಸುತ್ತುಗಳಲ್ಲಿ 37ರ ಹರೆಯದ ಪೃಥ್ವಿರಾಜ್ ಅವರು ಒಟ್ಟು 68 ಅಂಕ ಗಳಿಸಿದರು. ಅಗ್ರ ಸ್ಥಾನದಲ್ಲಿರುವ ಸ್ವೀಡನ್ನ ಲೆವಿನ್ ಆ್ಯಂಡರ್ಸನ್ಗಿಂತ ಆರು ಅಂಕ ಹಿಂದಿದ್ದಾರೆ. ಅರ್ಹತಾ ಸುತ್ತು ಮಂಗಳವಾರವೂ ಮುಂದುವರಿಯಲಿದ್ದು, ಶೂಟರ್ಗೆ ಈಗಲೂ ಅವಕಾಶವಿದೆ.
Next Story





