ಪಾಕಿಸ್ತಾನ ಚಾಂಪಿಯನ್ಸ್ ವಿರುದ್ಧ ಗೆಲುವನ್ನು ಸಂಭ್ರಮಿಸಿದ ಪಠಾಣ್ ಸಹೋದರರು

ಯೂಸುಫ್ ಪಠಾಣ್ ,ಯುವರಾಜ್ ಸಿಂಗ್, ಇರ್ಫಾನ್ ಪಠಾಣ್ | PC : X
ಬರ್ಮಿಂಗ್ಹ್ಯಾಮ್: ಭಾರತ ಕ್ರಿಕೆಟ್ ತಂಡ 15 ದಿನಗಳಲ್ಲಿ ಎರಡು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ರೋಹಿತ್ ಶರ್ಮಾ ನೇತೃತ್ವದ ತಂಡ ಟಿ20 ವಿಶ್ವಕಪ್ ಜಯಿಸಿ 11 ವರ್ಷಗಳ ಐಸಿಸಿ ಟ್ರೋಫಿ ಬರವನ್ನು ನೀಗಿಸಿಕೊಂಡಿತ್ತು. ಆ ನಂತರ ಇಂಡಿಯಾ ಚಾಂಪಿಯನ್ಸ್ ತಂಡ ಇಂಗ್ಲೆಂಡ್ನಲ್ಲಿ ನಡೆದಿರುವ ಮೊದಲ ಆವೃತ್ತಿಯ ಲೆಜೆಂಡ್ಸ್ ವರ್ಲ್ಡ್ ಚಾಂಪಿಯನ್ಶಿಪ್ನಲ್ಲಿ ವಿಜಯಶಾಲಿಯಾಗಿದೆ.
ಯುವರಾಜ್ ಸಿಂಗ್ ನಾಯಕತ್ವದ ಇಂಡಿಯಾ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಚಾಂಪಿಯನ್ಸ್ ತಂಡವನ್ನು ಶನಿವಾರ ನಡೆದ ಫೈನಲ್ನಲ್ಲಿ 5 ವಿಕೆಟ್ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿದೆ. ಸೊಹೈಲ್ ತನ್ವೀರ್ ಎಸೆದ 19ನೇ ಓವರ್ನ ಮೊದಲ ಎಸೆತವನ್ನು ಬೌಂಡರಿಗೆ ಅಟ್ಟಿದ ಇರ್ಫಾನ್ ಪಠಾಣ್ ಭಾರತವನ್ನು ಗೆಲುವಿನ ದಡ ಸೇರಿಸಿದರು. ಆಗ ಇರ್ಫಾನ್ ಸಹೋದರ ಯೂಸುಫ್ ಪಠಾಣ್ ಡಗೌಟ್ನಿಂದ ಮಧ್ಯ ಪಿಚ್ನತ್ತ ಧಾವಿಸಿ ಸಹೋದರನನ್ನು ಆಲಿಂಗಿಸಿಕೊಂಡು ಸಂಭ್ರಮಿಸಿದರು.
Next Story





