ಶ್ರೀಮಂತ ಉದ್ಯಮಿಗಳೂ ವಿಶ್ವಕಪ್ ಫೈನಲ್ನ ಪಾಸ್ ಕೇಳುತ್ತಾರೆ: ಕೈಗಾರಿಕೋದ್ಯಮಿ ಹರ್ಷ್ ಗೊಯೆಂಕಾ
ಇಂದು ವಿಶ್ವಕಪ್ ಫೈನಲ್

Photo : Facebook/RPGgroup
ಹೊಸದಿಲ್ಲಿ: ವಿಶ್ವಕಪ್ ಸರಣಿಯ ಫೈನಲ್ ಪಂದ್ಯಾಟಗಳ ಟಿಕೆಟ್ಗಳ ಕುರಿತು ಕೈಗಾರಿಕೋದ್ಯಮಿ ಹರ್ಷ್ ಗೊಯೆಂಕಾ ಅವರು ಮಾಡಿರುವ ಪೋಸ್ಟ್ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದೆ. ವಿಶ್ವಕಪ್ ಫೈನಲ್ಗಳನ್ನು ವೀಕ್ಷಿಸಲು ಉದ್ಯಮಿಗಳೂ ಉಚಿತ ಪಾಸ್ಗಳನ್ನು ಕೇಳುತ್ತಾರೆ ಎಂದು RPG ಗ್ರೂಪ್ ಚೇರ್ಪರ್ಸನ್ ಹರ್ಷ್ ಗೊಯೆಂಕಾ ಅವರು ಟ್ವೀಟ್ ಮಾಡಿದ್ದಾರೆ ಎಂದು NDTV ವರದಿ ಮಾಡಿದೆ.
#WorldcupFinal ಗೆ ಟಿಕೆಟ್ ಪಡೆಯಲು ನನ್ನ ಯಾವುದೇ ಉದ್ಯಮಿ ಸ್ನೇಹಿತರು ಹಣ ನೀಡಿಲ್ಲ, ಅವರೆಲ್ಲರೂ 'ಪಾಸ್' ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಣ ಪಾವತಿಸಲು ಶ್ರೀಮಂತರು ಬಯಸುತ್ತಿಲ್ಲ. ಇದು ವಿಪರ್ಯಾಸ ಎಂದು ಗೊಯೆಂಕಾ ಹೇಳಿದ್ದಾರೆ.
ಗೊಯೆಂಕಾ ಟ್ವೀಟ್ಗೆ ಪ್ರತಿಕ್ರಿಯಿಸಿದ ನೆಟ್ಟಿಗರು ನೀವು ಫೈನಲ್ ವೀಕ್ಷಿಸಲು ಪಾಸ್ ಪಡೆದಿದ್ದೀರಾ ಅಥವಾ ಟಿಕೆಟ್ ಕೊಂಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅವರು ಎರಡೂ ಇಲ್ಲ ಎಂದು ಉತ್ತರಿಸಿದ್ದಾರೆ.
ಫೈನಲ್ ಪಂದ್ಯದ ಟಿಕೆಟ್ಗಳ ಬೆಲೆಯು ಒಂದಕ್ಕೆ ₹ 1.87 ಲಕ್ಷದಷ್ಟು ಏರಿದೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಫೈನಲ್ನಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಎದುರಿಸಲಿದೆ







