ಐಪಿಎಲ್ ಗೆ ಆರ್ ಸಿ ಬಿ ತಯಾರಿ ಆರಂಭ | ಶೀಘ್ರವೇ ವಿರಾಟ್ ಕೊಹ್ಲಿ ಸೇರ್ಪಡೆ

Photo: PTI
ಹೊಸದಿಲ್ಲಿ: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಋತುವಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿ ಬಿ)ತಂಡ ಪಂದ್ಯಾವಳಿ ಪೂರ್ವ ಶಿಬಿರವನ್ನು ಆರಂಭಿಸಿದೆ. ಹೊಸ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಹಾಗೂ ಕ್ರಿಕೆಟ್ ನಿರ್ದೇಶಕ ಮೊ ಬೊಬಟ್ ಅವರ ಮಾರ್ಗದರ್ಶನದಲ್ಲಿ ಆಟಗಾರರು ತರಬೇತಿ ಆರಂಭಿಸಿದ್ದಾರೆ.
ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಇನ್ನಷ್ಟೇ ಆರ್ ಸಿ ಬಿ ಪಾಳಯವನ್ನು ಸೇರಿಕೊಳ್ಳಬೇಕಾಗಿದೆ. ನಾಯಕ ಎಫ್ಡು ಪ್ಲೆಸಿಸ್ ಹಾಗೂ ವೆಸ್ಟ್ಇಂಡೀಸ್ ವೇಗದ ಬೌಲರ್ ಅಲ್ಝಾರಿ ಜೋಸೆಫ್ ಸಹಿತ ಹಲವು ಆಟಗಾರರು ಬುಧವಾರ ಆರಂಭವಾಗಿರುವ ಶಿಬಿರದಲ್ಲಿ ಭಾಗವಹಿಸಿದ್ದಾರೆ.
ಮುಂದಿನ ದಿನಗಳಲಿ ಕೊಹ್ಲಿ ಆರ್ ಸಿ ಬಿ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆ ಇದೆ. ಮಾರ್ಚ್ 22ರಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸುವ ಮೂಲಕ ಆರ್ ಸಿ ಬಿ ತನ್ನ ಐಪಿಎಲ್ ಅಭಿಯಾನ ಆರಂಭಿಸಲಿದೆ. ಈ ಹಿನ್ನೆಲೆಯಲ್ಲಿ ಆರ್ ಸಿ ಬಿಯ ಪೂರ್ವ ತಯಾರಿ ಬಿರುಸಿನಿಂದ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
Next Story





