ನಿರಂತರ ಮಳೆ | ಭಾರತ ‘ಎ’- ಆಸ್ಟ್ರೇಲಿಯ ‘ಎ’ ನಡುವಿನ ಮೊದಲ ಅನಧಿಕೃತ ಏಕದಿನ ಪಂದ್ಯ ರದ್ದು

(Image Source: @AbhishekSainii/X.com)
ಕಾನ್ಪುರ, ಸೆ. 30: ಕಾನ್ಪುರದಲ್ಲಿ ಮಂಗಳವಾರ ನಡೆಯಬೇಕಾಗಿದ್ದ ಭಾರತ ‘ಎ’ ಮತ್ತು ಆಸ್ಟ್ರೇಲಿಯ ‘ಎ’ ತಂಡಗಳ ನಡುವಿನ ಮೊದಲ ಅನಧಿಕೃತ ಏಕದಿನ ಅಂತರ್ರಾಷ್ಟ್ರೀಯ ಪಂದ್ಯವು ಮಳೆಯಿಂದಾಗಿ ಒಂದೇ ಒಂದು ಎಸೆತವನ್ನು ಕಾಣದೆ ರದ್ದಾಗಿದೆ.
ಕಳೆದ ವರ್ಷ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯದ ವೇಳೆ ಕಾನ್ಪುರದ ಗ್ರೀನ್ಪಾರ್ಕ್ ಕ್ರೀಡಾಂಗಣ ಮತ್ತು ಅದರ ನೀರಿಂಗಿಸುವ ವ್ಯವಸ್ಥೆಯು ಟೀಕೆಗೆ ಗುರಿಯಾಗಿತ್ತು. ಸ್ವಲ್ಪ ಹೊತ್ತು ಮಳೆ ಬಿದ್ದರೂ ಇಡೀ ದಿನದ ಆಟವನ್ನು ರದ್ದುಪಡಿಸಬೇಕಾಗಿತ್ತು.
ಆದರೆ, ಮಂಗಳವಾರ ಹಿಡಿದ ಮಳೆ ಬಿಡಲೇ ಇಲ್ಲ. ಹಾಗಾಗಿ, ಅಲ್ಲಿನ ನೀರಿಂಗಿಸುವ ವ್ಯವಸ್ಥೆಯು ಇನ್ನೊಮ್ಮೆ ಪರೀಕ್ಷೆಗೆ ಒಳಪಡುವ ಪ್ರಮೇಯ ತಪ್ಪಿತು.
ಟಾಸ್ಗೆ 20 ನಿಮಿಷ ಇರುವಾಗ ಮಳೆ ಆರಂಭವಾಯಿತು. ಮತ್ತೆ ಮಳೆಯದೇ ಆಟ ನಡೆಯಿತು. ಪಂದ್ಯವನ್ನು ರದ್ದುಪಡಿಸಲಾಯಿತು.
ಇವೇ ತಂಡಗಳ ನಡುವಿನ ಎರಡನೇ ಅನಧಿಕೃತ ಏಕದಿನ ಅಂತರ್ರಾಷ್ಟ್ರೀಯ ಪಂದ್ಯವು ಇದೇ ಮೈದಾನದಲ್ಲಿ ಶುಕ್ರವಾರ ನಡೆಯಲಿದೆ.
Next Story





