ಮಹಿಳೆಯರ 400 ಮೀ.ರಿಪಿಚೇಜ್ ಸುತ್ತು | ಕಿರಣ್ ಪಹಲ್ಗೆ 6ನೇ ಸ್ಥಾನ ; ಸೆಮಿಫೈನಲ್ ತಲುಪಲು ವಿಫಲ

ಕಿರಣ್ ಪಹಲ್ | PC : PTI
ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮಂಗಳವಾರ ನಡೆದ ಮಹಿಳೆಯರ 400 ಮೀ. ಓಟದ ರಿಪಿಚೇಜ್ ಸುತ್ತಿನಲ್ಲಿ 52.59 ಸೆಕೆಂಡ್ನಲ್ಲಿ ಗುರಿ ತಲುಪಿದ ಭಾರತದ ಓಟಗಾರ್ತಿ ಕಿರಣ್ ಪಹಲ್ ಆರನೇ ಸ್ಥಾನ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಸೆಮಿ ಫೈನಲ್ನಲ್ಲಿ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಸೋಮವಾರ ನಡೆದ 400 ಮೀ. ಹೀಟ್ನಲ್ಲಿ 52.51 ಸೆಕೆಂಡ್ನಲ್ಲಿ ಗುರಿ ತಲುಪಿದ್ದ ಕಿರಣ್ 7ನೇ ಸ್ಥಾನ ಪಡೆದಿದ್ದರು. ನೇರವಾಗಿ ಸೆಮಿ ಫೈನಲ್ ತಲುಪುವಲ್ಲಿ ವಿಫಲರಾಗಿದ್ದರು.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಈ ಬಾರಿ ಹರ್ಡಲ್ಸ್ ಸ್ಪರ್ಧೆ ಸಹಿತ 200 ಮೀ.ನಿಂದ 1500 ಮೀ. ತನಕ ಎಲ್ಲ ವೈಯಕ್ತಿಕ ಟ್ರ್ಯಾಕ್ ಸ್ಪರ್ಧೆಗಳಲ್ಲಿ ರಿಪಿಚೇಜ್ ಸುತ್ತನ್ನು ಪರಿಚಯಿಸಲಾಗಿದೆ. ಹೀಗಾಗಿ ಕಿರಣ್ ಅವರು ರಿಪಿಚೇಜ್ ಸುತ್ತಿನ ಮೂಲಕ ಸೆಮಿ ಫೈನಲ್ ಪ್ರವೇಶಿಸುವ ಮತ್ತೊಂದು ಅವಕಾಶ ಪಡೆದಿದ್ದರು.
Next Story





