ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್: ಕ್ವಾರ್ಟರ್ ಫೈನಲ್ ಗೆ ನಿಖಾತ್ ಝರೀನಾ

ನಿಖಾತ್ ಝರೀನಾ | PC : @TheKhelIndia
ಹೊಸದಿಲ್ಲಿ,ಸೆ.9: ಎರಡು ಬಾರಿಯ ಚಾಂಪಿಯನ್ ನಿಖಾತ್ ಝರೀನಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಮಂಗಳವಾರ ಜಪಾನಿನ ಬಾಕ್ಸರ್ ಯುನಾ ನಿಶಿನಕಾರನ್ನು ಮಣಿಸಿ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದ್ದಾರೆ.
ಶ್ರೇಯಾಂಕರಹಿತ ಝರೀನಾ ಮಹಿಳೆಯರ 51 ಕೆಜಿ ವಿಭಾಗದ ಅಂತಿಮ-16ರ ಸುತ್ತಿನ ಸ್ಪರ್ಧೆಯಲ್ಲಿ 21ರ ಹರೆಯದ ಎದುರಾಳಿಯ ವಿರುದ್ಧ ಸರ್ವಾನುಮತದ ನಿರ್ಧಾರದಲ್ಲಿ ಗೆಲುವು ದಾಖಲಿಸಿದರು.
ವಿಶ್ವ ಚಾಂಪಿಯನ್ ಶಿಪ್ ನಲ್ಲಿ 3ನೇ ಪದಕ ಮೇಲೆ ಕಣ್ಣಿಟ್ಟಿರುವ ಝರೀನಾ ಮುಂದಿನ ಸುತ್ತಿನಲ್ಲಿ 2 ಬಾರಿಯ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಹಾಗೂ 2022ರ ವರ್ಲ್ಡ್ ಲೈಟ್ ವೇಟ್ ಚಾಂಪಿಯನ್ ಟರ್ಕಿಯ ಬೂಸ್ ನಾಝ್ ರನ್ನು ಎದುರಿಸಲಿದ್ದಾರೆ.
ಸೋಮವಾರ ನಡೆದ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಸುಮಿತ್ ಕುಂಡು(75ಕೆಜಿ), ಸಚಿನ್ ಸಿವಾಚ್(60ಕೆಜಿ) ಹಾಗೂ ಏಶ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ ನರೇಂದರ್ ಬೆರ್ವಾಲ್(90+ಕೆಜಿ)ಸೋಲನುಭವಿಸಿದರು.
Next Story





