ಆರ್ಥಿಕ ಹೂಡಿಕೆ ಕುರಿತು ಮಾಹಿತಿ ಕಾರ್ಯಾಗಾರ

ಕುಂದಾಪುರ, ಅ.7: ಕುಂದಾಪುರ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ಎಂ.ಬಿ.ಎ ವಿಭಾಗದ ವತಿಯಿಂದ ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೆಕ್ಯೂರಿಟೀಸ್ ಮಾರ್ಕೆಟ್ಸ್ ಸಹಯೋಗದೊಂದಿಗೆ ಫೈನಾನ್ಸಿಯಲ್ ಪ್ಲಾನಿಂಗ್ ಫಾರ್ ಯಂಗ್ ಪ್ರೊಫೆಷನಲ್: ಬಿಲ್ಡಿಂಗ್ ಎ ಸ್ಟ್ರಾಂಗ್ ಫೌಂಡೇಶನ್ ಎಂಬ ವಿಷಯದ ಬಗ್ಗೆ ಎರಡು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಸೆ.ಬಿ ಸ್ಮಾರ್ಟ್ ಟ್ರೈನರ್ ಸ್ಟಿವನ್ ರಾಬರ್ಟ್ ಟೆಲ್ಲಿಸ್, ವಿವಿಧ ಹೂಡಿಕೆಗಳ ಬಗ್ಗೆ ಅರಿವು ಮೂಡಿಸಿದರು. ಮೊದಲು ವಿದ್ಯಾರ್ಥಿಗಳು ಜೀವನದಲ್ಲಿ ಗುರಿಯನ್ನು ರೂಪಿಸಿಕೊಳ್ಳಬೇಕು. ಈ ಗುರಿಯನ್ನು ಹೇಗೆ ನಿರ್ಧರಿಸಬೇಕು ಹಾಗೆ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ ಉಳಿತಾಯ ಮಾಡಿ ಈ ಉಳಿತಾಯವನ್ನು ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಕೆಯ ವಿವಿಧ ಸ್ತರಗಳನ್ನು ತಿಳಿಸಿದರು.
ಮ್ಯೂಚುವಲ್ ಫಂಡ್, ಇಕ್ವಿಟಿ, ಡಿರಾವೇಟಿವ್ ಹಾಗೂ ಕಮೋಡಿಟಿ ಮಾರುಕಟ್ಟೆಗಳ ಬಗ್ಗೆ ತಿಳಿಸಿದರು. ಇದರ ಜೊತೆಗೆ ರಿಯಲ್ ಟ್ರೇಡಿಂಗ್ ಮಾಡಿಸುವುದರೊಂದಿಗೆ ವಿದ್ಯಾರ್ಥಿಗಳಿಗೆ ಹೂಡಿಕೆಯ ಬಗ್ಗೆ ಆಸಕ್ತಿ ಮೂಡಿಸಿದರು.
ಈ ಕಾರ್ಯಗಾರದಲ್ಲಿ ಎಂಐಟಿಕೆ ಪ್ರಾಂಶುಪಾಲ ಡಾ.ರಾಮಕೃಷ್ಣ ಹೆಗಡೆ, ಎಂಬಿಎ ವಿಭಾಗದ ಮುಖ್ಯಸ್ಥೆ ಡಾ.ಸುಚಿತ್ರ ಪೂಜಾರಿ, ಉಪನ್ಯಾಸಕರು ಮತ್ತು ಎಂಬಿಎ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





