ಅಂಚೆ ನೌಕರರ 19ನೇ ಜಂಟಿ ದ್ವೈವಾರ್ಷಿಕ ಅಧಿವೇಶನ

ಉಡುಪಿ, ಮೇ 24: ರಾಷ್ಟ್ರೀಯ ಅಂಚೆ ನೌಕರರ ಸಂಘ, ಗ್ರೂಪ್ ಸಿ, ಪೋಸ್ಟ್‌ಮೆನ್, ಎಂಟಿಎಸ್ ಮತ್ತು ಗ್ರಾಮೀಣ ಅಂಚೆ ನೌಕರರು ಉಡುಪಿ ವಿಭಾಗೀಯ ಶಾಖೆಗಳು ಉಡುಪಿ ಇವರ ವತಿಯಿಂದ 19ನೇ ಜಂಟಿ ದ್ವೈವಾರ್ಷಿಕ ಅಧಿವೇಶನವನ್ನು ರವಿವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ರಮೇಶ್ ಪ್ರಭು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ರಾಷ್ಟ್ರೀಯ ಅಂಚೆ ನೌಕರರ ಸಂಘ ಗ್ರೂಪ್ ಸಿ ವಲಯ ಅಧ್ಯಕ್ಷ ಸುರೇಶ್ ಕೆ. ವಹಿಸಿದ್ದರು. ಈ ಸಂದರ್ಭದಲ್ಲಿ ರವೀಂದ್ರ ನಾಕ್ ಅವರನ್ನು ಸನ್ಮಾನಿಸಲಾಯಿತು.
ಮಣಿಪಾಲ ಅಂಚೆ ವ್ಯವಹಾರ ಕೇಂದ್ರದ ಅದೀಕ್ಷಕ ಜಯರಾಮ ಶೆಟ್ಟಿ, ರಾಷ್ಟ್ರೀಯ ಅಂಚೆ ನೌಕರರ ಸಂಘ ಗ್ರೂಪ್ ಸಿ ಇದರ ವಲಯ ಕಾರ್ಯದರ್ಶಿ ಎಸ್.ಖಂಡೋಜಿ ರಾವ್, ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಂಘದ ಕರ್ನಾಟಕ ವಲಯ ಕಾರ್ಯದರ್ಶಿ ಎಂ.ಪಿ.ಚಿತ್ರಸೇನ ಮುಖ್ಯ ಅತಿಥಿಗಳಾಗಿದ್ದರು.
ರಾಷ್ಟ್ರೀಯ ಅಂಚೆ ನೌಕರರ ಸಂಘದ ಹಿರಿಯ ಮಾರ್ಗದರ್ಶಕ ಎನ್.ದಯಾನಂದ, ಪೋಸ್ಟ್‌ಮೆನ್ ಎಂಟಿಎಸ್ ವಿಭಾಗೀಯ ಅಧ್ಯಕ್ಷ ಬಾಲಚಂದ್ರ ಕೆ.ಆರ್., ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಂಘದಲ ವಿಭಾಗೀಯ ಕಾರ್ಯದರ್ಶಿ ಪ್ರಸನ್ನ ಕುಮಾರ್ ಶೆಟ್ಟಿ, ಪದಾಧಿಕಾರಿ ಸುರೇಶ್ ಶೇರಿಗಾರ್ ಉಪಸ್ಥಿತರಿದ್ದರು.
ಪೋಸ್ಟ್ ಮಾಸ್ಟರ್ ಗುರುಪ್ರಸಾದ್ ಸ್ವಾಗತಿಸಿದರು. ಗ್ರೂಪ್ ಸಿ ವಿಭಾಗೀಯ ಕಾರ್ಯದರ್ಶಿ ಪ್ರವೀಣ್ ಜತ್ತನ್ ಕಾರ್ಯಕ್ರಮ ನಿರೂಪಿಸಿದರು. ವಿಭಾಗೀಯ ಕಾರ್ಯದರ್ಶಿ ಸುಭಾಸ್ ತಿಂಗಳಾಯ ವಂದಿಸಿದರು.






