ಅಜೆಕಾರು | ಹಸುಗೂಸು ಮೃತ್ಯು

ಸಾಂದರ್ಭಿಕ ಚಿತ್ರ
ಅಜೆಕಾರು: ಹಾಲು ಕುಡಿದು ಮಲಗಿದ್ದ ಹಸುಗೂಸೊಂದು ಮೃತಪಟ್ಟ ಘಟನೆ ಆ.7ರಂದು ಬೆಳಗಿನ ಜಾವಾ ಅಂಡಾರಿನಲ್ಲಿ ನಡೆದಿದೆ.
ಅಂಡಾರು ಗ್ರಾಮದ ರೇಖಾ (31) ಎಂಬವರು ಜು.18 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು ಹುಟ್ಟಿದ ಮಗುವಿನ ಭಾರ ಕಡಿಮೆ ಇದ್ದುದ್ದರಿಂದ ಆ.1 ರವರೆಗೆ ಆಸ್ಪತ್ರೆಯಲ್ಲಿಯೇ ಇದ್ದು ನಂತರ ಡಿಸ್ ಚಾರ್ಜ್ ಆಗಿ ಮನೆಗೆ ಬಂದಿದ್ದರು.
ಆ.7ರಂದು ಬೆಳಿಗ್ಗೆ 4:00 ಗಂಟೆ ರೇಖಾ ಮಗುವಿಗೆ ಎದೆ ಹಾಲನ್ನು ಕುಡಿಸಿ ಮಲಗಿಸಿದ್ದು, ಬಳಿಕ ನೋಡುವಾಗ ಮಗು ಕೈ ಕಾಲು ಅಲ್ಲಾಡಿಸದೇ ಇರುವುದನ್ನು ಕಂಡುಬಂದಿದೆ. ಕೂಡಲೇ ಮಗುವನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೊಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಮಗು ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





