ಉಡುಪಿ: ವಿಕಲಚೇತನರಿಗೆ ವಿವಿಧ ಸವಲತ್ತು ವಿತರಣೆ
ಉಡುಪಿ: ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖಾ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಅವರು ಇಂದು ನಗರದ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿವಿಧ ಸಲಕರಣೆಗಳನ್ನು ವಿತರಿಸಿದರು.
ಸಚಿವರು ಯಂತ್ರಚಾಲಿತ ದ್ವಿಚಕ್ರ ವಾಹನವನ್ನು ಪರ್ಕಳದ ಮಧು ಮಸ್ಕರೇನಸ್, ಕಟಪಾಡಿಯ ಜೆನಿನಿವ ಗ್ಲ್ಯಾಡ್ನ ಡಿ ಅಲ್ಮೇಡಾ, ಆಲೂರಿನ ಶೇಖರ, ಬೈಲೂರಿನ ಸುರೇಶ್ ಆಚಾರಿ, ಕಾರ್ಕಳ ಮಿಯಾರಿನ ವೆಂಕಟೇಶ್ ನಾಯ್ಕ ಹಾಗೂ ಕಾಂತಾವರದ ರಾಜೇಶ್ ಅವರಿಗೆ ವಿತರಿಸಿದರು.
ಬ್ಯಾಟರಿಚಾಲಿತ ವೀಲ್‌ಚೇರ್‌ನ್ನು ತೋನ್ಸೆಯ ಜಾಫರ್ ರಯ್ಯಾನ್ ಶಬ್ಬೀರ್, ಕೋಟೇಶ್ವರದ ಡಯಾನ ಬಿನ್ ಫಿಲಿಫ್ ಬರೆಟ್ಟೊ ಹಾಗೂ ಬೈಂದೂರಿನ ಎಸ್ ನಾಗಪ್ಪ ಇವರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮತ್ತಿತರರು ಉಪಸ್ಥಿತರಿದ್ದರು.







