ಅ.18ರಂದು ಉಡುಪಿಯಲ್ಲಿ ‘ಗುರುದತ್ತ್ -100’ ಆಚರಣೆ
ಉಡುಪಿ : ಉಡುಪಿ ರಥಬೀದಿ ಗೆಳೆಯರು ಸಾಂಸ್ಕೃತಿಕ ಸಂಘಟನೆ ವತಿಯಿಂದ 1940-50ರ ದಶಕದ ಹಿಂದುಸ್ತಾನಿ ಚಿತ್ರರಂಗದಲ್ಲಿ ವಿಭಿನ್ನವಾದ ಪ್ರಯೋಗ ನಡೆಸಿ, ಜನಪ್ರಿಯ ಸಿನೆಮಾ ಕಟ್ಟುವಿಕೆಗೆ ಹೊಸ ವ್ಯಾಕರಣ ಸೃಜಿಸಿದ ಕರಾವಳಿ ಮೂಲದ ಕಲಾವಿದ ಗುರುದತ್ತ್ ಅವರ ಹುಟ್ಟಿನ ನೂರು ವರ್ಷಗಳ ನೆನಪಿನ ಕಾರ್ಯಕ್ರಮ ‘ಗುರುದತ್ತ್-100’ನ್ನು ಅ.18ರಂದು ಸಂಜೆ 4ಗಂಟೆಗೆ ಉಡುಪಿ ಎಂ.ಜಿ.ಎಂ. ಕಾಲೇಜಿನ ಆಡಿಯೋ ವಿಶುವಲ್ ಹಾಲಿನಲ್ಲಿ ನಡೆಯಲಿದೆ.
ಗುರುದತ್ತರ ಕಲಾ ವಿಶೇಷತೆ ಕುರಿತು ಸಿನೆಮಾ ಬೋಧಕರು, ವಿಶ್ಲೇಷಕ ಸಂವರ್ತ ಸಾಹಿಲ್ ಮಾತನಾಡಲಿದ್ದಾರೆ. ನಂತರ ‘ಇನ್ ಸರ್ಚ್ ಆಫ್ ಗುರುದತ್ತ್’ ಚಿತ್ರ ಪ್ರದರ್ಶನ ಜರಗಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಮತ್ತು ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





