ಕಾರ್ಕಳ | ಜಿಲ್ಲಾ ಉತ್ತಮ ಯುವ ಸಾಹಿತಿ, ಉತ್ತಮ ಸಂಘ ಸಂಸ್ಥೆಗೆ ನೀಡುವ ಪ್ರಶಸ್ತಿಗೆ ಅರ್ಜಿ ಆಹ್ವಾನ

ಕಾರ್ಕಳ : ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನೀಡಲಾಗುವ ಉಡುಪಿ ಜಿಲ್ಲೆ “ಉತ್ತಮ ಯುವ ಸಾಹಿತಿ ಪ್ರಶಸ್ತಿ” ಹಾಗೂ ಕನ್ನಡ ಕಾಯಕದಲ್ಲಿ ಸೇವೆ ಸಲ್ಲಿಸಿದ ಉತ್ತಮ ಸಂಘ ಸಂಸ್ಥೆ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಪ್ರಶಸ್ತಿಗಳನ್ನು ಡಾ. ಸುಧಾಕರ ಶೆಟ್ಟಿ (ಅಧ್ಯಕ್ಷರು, ಪದ್ಮ ಗೋಪಾಲ ಎಜುಕೇಶನ್ ಟ್ರಸ್ಟ್, ಗಣಿತ ನಗರ ಕುಕ್ಕುಂದೂರು) ಅವರ ಪ್ರಾಯೋಜಕತ್ವದಲ್ಲಿ, ದಿವಂಗತ ಪ್ರೊ. ಎನ್. ರಾಮಚಂದ್ರ ಮತ್ತು ಗೋಪಾಲ ಭಂಡಾರಿ ಅವರ ಸ್ಮರಣಾರ್ಥವಾಗಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯಲ್ಲಿ 10,000 ರೂ. ನಗದು ಮತ್ತು ಶಾಶ್ವತ ಫಲಕ ಒಳಗೊಂಡಿವೆ.
ಆಸಕ್ತರು ಸಂಪೂರ್ಣ ವಿವರಗಳೊಂದಿಗೆ ಅರ್ಜಿಯನ್ನು ದೇವದಾಸ್ ಕೆರೆಮನೆ ಗೌರವ ಕಾರ್ಯದರ್ಶಿಗಳು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ C/o "ವಂದ್ಯುಕ್ತ" ನಿಸರ್ಗನಗರ , ಶ್ಯಾಮಲಾ ಕಾಂಪೌಂಡ್, ಮಿಯ್ಯಾರು, ಮುಡಾರು, ಬಜಗೋಳಿ ಅಂಚೆ, ಕಾರ್ಕಳ -574122 ದೂರವಾಣಿ: 916360686393 ಈ ವಿಳಾಸಕ್ಕೆ ಡಿ.10 ರ ಒಳಗೆ ತಲುಪುವಂತೆ ಕಳುಹಿಸಿ ಕೊಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕ ಪ್ರಕಟನೆಯಲ್ಲಿ ತಿಳಿಸಿದೆ.





