ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ಹೊಸ ಸಂಹಿತೆ ವಿರುದ್ಧ ಹೋರಾಟ: ಸುರೇಶ್ ಕಲ್ಲಾಗರ್
ಕುಂದಾಪುರ, ಅ.1: ಎನ್ಡಿಎ ಸರಕಾರದ ನೀತಿಗಳು ಬೆಲೆಯೇರಿಕೆ, ನಿರುದ್ಯೋಗವನ್ನು ಮತ್ತಷ್ಟು ಹೆಚ್ಚಿಸಿದೆ. ಇದರ ವಿರುದ್ದ ಸಿಪಿಎಂ ಪಕ್ಷ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಬೇಕಾಗಿದೆ. ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ಹೊಸ ಸಂಹಿತೆ ಹೋರಾಟದ ಮೂಲಕ ಹಿಮ್ಮೆಟ್ಟಿಸ ಬೇಕು ಎಂದು ಸಿಪಿಎಂ ಬೈಂದೂರು ವಲಯ ಸಮಿತಿ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದ್ದಾರೆ.
ತಲ್ಲೂರು ಸುಪ್ರೀಂ ಕಾರ್ಖಾನೆ ವಠಾರದಲ್ಲಿ ಮಂಗಳವಾರ ನಡೆದ ಸಿಪಿಎಂ ಪಕ್ಷದ ಸುಪ್ರಿಂ ಕಾರ್ಖಾನೆ ಕಾರ್ಮಿಕರ ಶಾಖಾ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಧ್ವಜಾರೋಹಣವನ್ನು ಪಕ್ಷದ ಹಿರಿಯ ಸದಸ್ಯ ಬಾಬು ಪೂಜಾರಿ ನೆರವೇರಿಸಿದರು. ಶಾಖಾ ಕಾರ್ಯದರ್ಶಿ ಅಣ್ಣಯ್ಯ ವರದಿ ಮಂಡಿಸಿದರು. ವರದಿ ಮೇಲೆ ಚರ್ಚೆ ನಡೆದು ಅಂಗೀಕಾರ ಮಾಡಲಾಯಿತು. ನೂತನ ಕಾರ್ಯದರ್ಶಿಯಾಗಿ ಹೆರಿಯ ಅವರನ್ನು ಆಯ್ಕೆ ಮಾಡಲಾಯಿತು.
ನ.3ರಂದು ಬೈಂದೂರಿ ನಲ್ಲಿ ನಡೆಯುವ ಬೈಂದೂರು ವಲಯ ಸಮ್ಮೇಳನಕ್ಕೆ ಶಾಖೆಯಿಂದ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷತೆಯನ್ನು ಪಕ್ಷದ ಸದಸ್ಯರಾದ ಲಕ್ಷ್ಮಣ ಮೂವತ್ತುಮುಡಿ ವಹಿಸಿದ್ದರು. ಪಕ್ಷದ ಬೈಂದೂರು ವಲಯ ಸಮಿತಿ ಮುಖಂಡ ಗಣಪ ಉಪಸ್ಥಿತರಿದ್ದರು. ಸುರೇಂದ್ರ ಸ್ವಾಗತಿಸಿದರು. ಸಂತೋಷ್ ವಂದಿಸಿದರು.