’ಯುವ ದಬಾಜೋ’ ಸಮ್ಮೇಳನ: ಕಣಜಾರ್ ಘಟಕ ಚಾಂಪಿಯನ್
ಉಡುಪಿ, ಅ.1: ಭಾರತೀಯ ಕಥೋಲಿಕ್ ಯುವ ಸಂಚಲನ ಉಡುಪಿ ಧರ್ಮ ಪ್ರಾಂತ್ಯದ ನೇತ್ರತ್ವದಲ್ಲಿ ’ಯುವ ದಬಾಜೋ 2024’ ಯುವ ಸಮ್ಮೇಳನವನ್ನು ಉದ್ಯಾವರದ ಕ್ಸೇವಿಯರ್ ಸಭಾಭವನದಲ್ಲಿ ಇಂದು ಜರಗಿತು.
ಉಡುಪಿ ವಲಯದ ಪ್ರಧಾನ ಧರ್ಮಗುರು ವಂ.ಫಾ.ಚಾರ್ಲ್ಸ್ ಮಿನೇಜಸ್ ಪೂಜಾ ವಿಧಿಯ ಮುಖಾಂತರ ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಬಳಿಕ ಘಟಕ ಹಂತದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.
ಯುವ ದಬಾಜೋ ಕಾರ್ಯಕ್ರಮದಲ್ಲಿ ಕಣಜಾರ್ ಘಟಕ ಚಾಂಪಿಯನ್ ಹಾಗೂ ಪೆರಂಪಳ್ಳಿ ಘಟಕ ರನ್ನರ್ಸ್ ಪ್ರಶಸ್ತಿ ಗೆದ್ದು ಕೊಂಡಿತು. ಬ್ಯಾಂಡ್ ಹೋರಾಟದ ಉನ್ನತ ಗೌರವಗಳನ್ನು ಕಲ್ಯಾಣಪುರ ವಲಯ ಪ್ರಥಮ ಸ್ಥಾನ, ಉಡುಪಿ ವಲಯ ಎರಡನೇ ಸ್ಥಾನ ಮತ್ತು ಕಾರ್ಕಳ ವಲಯ ಮೂರನೇ ಸ್ಥಾನ ಪಡೆಯಿತು.
ಸಮಾರೋಪ ಸಮಾರಂಭದಲ್ಲಿ ಉಡುಪಿ ವಲಯದ ಪ್ರಧಾನ ಧರ್ಮಗುರು ವಂ.ಫಾ.ಚಾರ್ಲ್ಸ್ ಮಿನೇಜಸ್, ಉದ್ಯಾವರದ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಪ್ರಧಾನ ಧರ್ಮಗುರು ವಂ.ಪಾ.ಅನಿಲ್ ಡಿಸೋಜ, ಸಹಾಯಕ ಧರ್ಮಗುರು ವಂ.ಸ್ಟೀವನ್ ಫೆರ್ನಾಂಡಿಸ್, ಉಡುಪಿ ಧರ್ಮ ಪ್ರಾಂತ್ಯದ ಐಸಿವೈಎಂ ನಿರ್ದೇಶಕ ವಂ.ಫಾ.ಸ್ಟೀವನ್ ಫೆರ್ನಾಟಡೀಸ್, ಯುವ ನ್ಯಾಯವಾದಿ ರಾಯನ್ ಫೆರ್ನಾಂಡಿಸ್, ಐಸಿವೈಎಂ ಕರ್ನಾಟಕ ಪ್ರದೇಶದ ಅಧ್ಯಕ್ಷೆ ವಿಲೀನ ಗೋನ್ಸಾಲ್ವಿಸ್, ಪಾಲನ ಮಂಡಳಿಯ ಉಪಾಧ್ಯಕ್ಷ ಲಾರೆನ್ಸ್ ಡೇಸಾ, ಯುವ ಆಯೋಗದ ಸಂಚಾಲಕಿ ಪ್ರಿಯಾ ಫುರ್ಟ್ತಾಡೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಡುಪಿ ಧರ್ಮ ಪ್ರಾಂತ್ಯದ ಐಸಿವೈಎಂ ಅಧ್ಯಕ್ಷ ಗೋಡ್ವಿನ್ ಮಸ್ಕರೇನಸ್ ಸ್ವಾಗತಿಸಿದರು. ಉಪಾಧ್ಯಕ್ಷ ಮರ್ವಿನ್ ಅಲ್ಮೇಡಾ ವಂದಿಸಿದರು. ಕಾರ್ಯದರ್ಶಿ ರಿಯಾ ಅರಾನ್ನ ಕಾರ್ಯಕ್ರಮ ನಿರೂಪಿಸಿದರು. ಕಾರ್ಯ ಕ್ರಮದಲ್ಲಿ ಉಡುಪಿ ಧರ್ಮ ಪ್ರಾಂತ್ಯದ 800ಕ್ಕೂ ಅಧಿಕ ಯುವಜನರು ಭಾಗವಹಿಸಿದ್ದರು.