ಬೆಂಗಳೂರಿಗೆ ತೆರಳಿದ್ದ ಯುವತಿ ನಾಪತ್ತೆ
ಉಡುಪಿ, ಅ.2: ಮಣಿಪಾಲದಲ್ಲಿ ಸೋಲಾರ್ ಕಂಪೆನಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದ ಪೆರ್ಡೂರು ಗ್ರಾಮದ ಸತೀಶ ಎಂಬವರು ಮಗಳು ಸೃಷ್ಟಿ(25) ಎಂಬವರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಜು.14ರಂದು ಆಕೆಯು ಕೆಲಸ ಮಾಡುತ್ತಿದ್ದ ಮಣಿಪಾಲ ಕಂಪೆನಿಯವರು ಬೆಂಗಳೂರಿಗೆ ಕಳುಹಿಸುತ್ತಿದ್ದಾರೆ ಎಂದು ಹೇಳಿ ನಿಟ್ಟೂರಿನ ಬಾಡಿಗೆ ಮನೆಯಿಂದ ಬೆಂಗಳೂರಿಗೆ ಹೋಗಿದ್ದಳು. ಬೆಂಗಳೂರಿಗೆ ಹೋದ ಬಳಿಕ ಸಂಪರ್ಕಕ್ಕೆ ಸಿಗದೆ ನಾಪತ್ತೆ ಯಾಗಿದ್ದಾಳೆ. ಕಂಪೆನಿಯಲ್ಲಿ ವಿಚಾರಿಸಿದಾಗ ಆಕೆ ಕಂಪೆನಿ ಕೆಲಸ ಬಿಟ್ಟು ಹೋಗಿರುವುದು ತಿಳಿದುಬಂತು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story