ಗೊಕಳ್ಳರ ವಿರುದ್ಧ ಕ್ರಮಕ್ಕೆ ಮುಸ್ಲಿಮ್ ಒಕ್ಕೂಟ ಆಗ್ರಹ

ಬೈಂದೂರು, ಫೆ.5: ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಬೈಂದೂರು ತಾಲೂಕು ಘಟಕದ ವತಿಯಿಂದ ಬೈಂದೂರು ಅಂಬಾ ಗಿಲು, ಶಿರೂರು ಹಾಗೂ ಇತರ ಭಾಗಗಳಲ್ಲಿ ನಡೆಯುತ್ತಿರುವ ಸರಣಿ ಗೋವು ಕಳ್ಳತನದ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿ ಬೈಂದೂರು ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ನಿಯೋಗದಲ್ಲಿ ಬೈಂದೂರು ಘಟಕದ ಅಧ್ಯಕ್ಷ ತಬ್ರೆಜ್ ನಾಗೂರು, ಜಿಲ್ಲಾ ಉಪಾಧ್ಯಕ್ಷ ಫಯಾಜ್ ಅಲಿ ಬೈಂದೂರು, ಕಾರ್ಯ ದರ್ಶಿ ತುಫೈಲ್ ಶಹಾಬುದ್ದೀನ್, ಖಜಾಂಚಿ ಸಯ್ಯದ್ ಅದ್ಮಲ್ ಶಿರೂರು, ನಿಕಟಪೂರ್ವ ಅಧ್ಯಕ್ಷ ಮೊಹೀನ್ ಬುವಾಜಿ, ಎಚ್.ಎಸ್.ಸಿದ್ದೀಕ್ ಶಿರೂರು, ಎನ್.ಜಿ. ಅಶ್ರಫ್ ನಾಗೂರು ಉಪಸ್ಥಿತರಿದ್ದರು.
Next Story