ವೃದ್ಧರ ಕುಟುಂಬ ಪತ್ತೆ ಹಚ್ಚುವಲ್ಲಿ ಸಹಾಯವಾಣಿ ಯಶಸ್ವಿ
ಉಡುಪಿ, ಫೆ.5: ರಕ್ಷಿಸಲ್ಪಟ್ಟು ಪುರ್ನವಸತಿ ಪಡೆದಿದ್ದ, ವೃದ್ಧರೊಬ್ಬರ ಮನೆಮಂದಿಯನ್ನು ಪತ್ತೆ ಹಚ್ಚುವಲ್ಲಿ ಉಡುಪಿಯ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವು ಯಶಸ್ವಿಯಾಗಿದೆ.
ಬೆಳಗಾವಿ ಮೂಲದ ಮಾದೇಶ ಶಿಂಧೆ, ಬದುಕಿನಲ್ಲಿ ಎದುರಾದ ಅಸಹಾಯಕ ಪರಿಸ್ಥಿತಿಯನ್ನು ಎದುರಿಸಲಾಗದೆ, ಉಡುಪಿ ಶ್ರೀಕೃಷ್ಣ ಮಠದ ಪರಿಸರದಲ್ಲಿ ಭಿಕ್ಷಾಟನೆಯಿಂದ ಜೀವನ ಸಾಗಿಸುತ್ತಿದ್ದರು. ಈ ಅಪರಿಚಿತ ವೃದ್ಧರನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡುವರು ರಕ್ಷಿಸಿದ್ದರು.
ವೃದ್ಧರು ಕಳೆದ 15 ವರ್ಷಗಳಿಂದ ಮನೆಯಿಂದ ಹೊರಗುಳಿದಿದ್ದರು. ಬಳಿಕ ವೃದ್ಧರನ್ನು ಉಡುಪಿಯ ಹೊಸಬದುಕು ಆಶ್ರಮದಲ್ಲಿ ಪುರ್ನವಸತಿ ಕಲ್ಪಿಸಿಸಲಾಗಿದತ್ತು, ವೃದ್ಧರು ಕಳೆದ ನಾಲ್ಕು ತಿಂಗಳುಗಳಿಂದ ಹೊಸಬದುಕು ಆಶ್ರಮದ ಸಂಚಾಲಕರಾದ ವಿನಯಚಂದ್ರ, ರಾಜಶ್ರೀ ಶೂಶ್ರೂಸೆ ಹಾಗೂ ಪೋಷಣೆಯಲ್ಲಿದ್ದರು.
ಈ ಕಾರ್ಯಚರಣೆಯಲ್ಲಿ ಆಪ್ತ ಸಮಾಲೋಚಕರಾದ ರೋಶನ್ ಕೆ.ಅಮೀನ್, ಪೂರ್ಣಿಮಾ ಭಾಗವಹಿಸಿದ್ದಾರೆ.
Next Story