ಪೆರ್ಡೂರು | ಹಿರಿಯ ನಾಗರಿಕರಿಗಾಗಿ ಹಿರಿಯೆರೊಟ್ಟುಗೊಂಜಿ ದಿನ

ಪೆರ್ಡೂರು, ಡಿ.9: ಪೆರ್ಡೂರು ಶ್ರಿಭೈರವನಾಥೇಶ್ವರ ಸೇವಾ ಸಮಿತಿ ವತಿಯಿಂದ ದ್ವಿತೀಯ ಬಾರಿಗೆ ಉಡುಪಿ ಜಿಲ್ಲೆಯ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ‘ಹಿರಿಯೆರೊಟ್ಟುಗೊಂಜಿ ದಿನ’ ಕಾರ್ಯಕ್ರಮವನ್ನು ಡಿ.28ರಂದು ಪೆರ್ಡೂರು ಸುಬ್ರಾಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ.
ಹಾಡು, ನೃತ್ಯ, ಛದ್ಮವೇಷ, ಮೋಜಿನ ಆಟಗಳು, ಹಾಸ್ಯ, ಸ್ಕಿಟ್ ಐದು ನಿಮಿಷ(ಸಹ ಕಲಾವಿದರಾಗಿ ಮನೆಯ ಸದಸ್ಯರು ಭಾಗವಹಿಸಬಹುದು) ಇವುಗಳೊಂದಿಗೆ ಹಾಗೂ ತಮ್ಮಲ್ಲಿರುವ ವಿಶೇಷ ಪ್ರತಿಭೆಯನ್ನು ಪ್ರದರ್ಶಿಸುವ ಇಚ್ಛೆಯುಳ್ಳ ಹಿರಿಯ ನಾಗರಿಕರು ಈ ಕೆಳಕಂಡ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಿ ಡಿ.15ರೊಳಗೆ ನೋಂದಾಯಿಸಿಕೊಳ್ಳಬೇಕು.
ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ವಯಸ್ಸಿನ ಯಾವುದೇ ದಾಖಲೆಯೊಂದಿಗೆ ಭಾಗವಹಿಸಬಹುದು. ಹಿರಿಯ ನಾಗರಿಕರಿಗೆ ಸ್ಪರ್ಧೆಗಳಿದ್ದು, ವಿಜೇತರಿಗೆ ಬಹುಮಾನ ನೀಡಲಾಗುವುದು. ಮಾಹಿತಿಗಾಗಿ ಸಂಪರ್ಕಿಸಲು 9743579059, 9900408243, 9743493177 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Next Story





