ಉಡುಪಿ: ಯುವ ಕಾಂಗ್ರೆಸ್‌ನಿಂದ ಸ್ಟಾಪ್ ವೋಟ್ ಚೊರಿ ಸ್ಟಿಕ್ಕರ್ ಅಭಿಯಾನ

ಉಡುಪಿ, ಆ.19: ಅಖಿಲ ಭಾರತ ಕಾಂಗ್ರೆಸ್ ಸಮಿತಿ ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್ ಸಮಿತಿ ಸೂಚನೆ ಮೇರೆಗೆ ರಾಷ್ಟ್ರ ವ್ಯಾಪಿ ನಡೆಯುತ್ತಿರುವ ಸ್ಟಾಪ್ ವೋಟ್ ಚೊರಿ ಸ್ಟಿಕ್ಕರ್ ಅಭಿಯಾನವನ್ನು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಉಡುಪಿ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿತ್ತು.
ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ ನೇತೃತ್ವದಲ್ಲಿ ಮಂಗಳವಾರ ಉಡುಪಿ ಬಸ್ ನಿಲ್ದಾಣ, ಉಡುಪಿ ತಾಲೂಕು ಕಚೇರಿ’ ಚುನಾವಣಾ ಕಚೇರಿ, ಉಡುಪಿ ನಗರಸಭೆ ಸಹಿತ ಇತರ ಸಾರ್ವಜನಿಕ ಸ್ಥಳಗಳಲ್ಲಿ, ವಾಹನಗಳು ಮತ್ತು ಬಸ್‌ಗಳಿಗೆ ಸ್ಟಾಪ್ ವೋಟ್ ಚೊರಿ ಸ್ಟಿಕ್ಕರ್ ಅಂಟಿಸುವ ಮೂಲಕ ಜನ ಸಾಮಾನ್ಯ ರಲ್ಲಿ ಮತಗಳ್ಳತನದ ವಿರುದ್ಧ ಜಾಗೃತಿ ಮೂಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಮಹಾಬಲ ಕುಂದರ್, ಮುರಳಿ ಶೆಟ್ಟಿ, ಕೀರ್ತಿ ಶೆಟ್ಟಿ ನಾಗೇಶ್ ಕುಮಾರ್ ಉದ್ಯವರ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಕೊಟ್ಯಾನ್, ಪ್ರಧಾನ ಕಾರ್ಯದರ್ಶಿ ಯತೀಶ್ ಕರ್ಕೇರಾ, ರಾಜ್ಯ ಯುವ ಕಾಂಗ್ರೆಸ್‌ನ ಸುರಯ್ಯ, ಜಿಲ್ಲಾ ಯುವ ಕಾಂಗ್ರೆಸ್‌ನ ಮಮತಾ ನಾಯಕ್, ಪ್ರದೀಪ್ ಶೆಟ್ಟಿ, ರೋಷನ್ ಶೆಟ್ಟಿ ನವೀನ್ ಸಾಲಿಯಾನ್, ರೋಶಿನಿ ಒಲಿವೇರಾ, ಅಹಮದ್ ಉಡುಪಿ, ಲಕ್ಷ್ಮೀಶ್ ಶೆಟ್ಟಿ, ಮಂಜುನಾಥ್ ಶೆಟ್ಟಿ, ಪ್ರವೀಶ್ ಶೆಟ್ಟಿ, ಅಶ್ವಿನ್ ಮಡಿವಾಳ್, ಶಶಿಧರ ಶಹವಾಲ್ದಾರ್‌ಬೆಟ್ಟು, ಸೂರಜ್ ಕರ್ಕೇರಾ, ಗಣೇಶ್ ಉಡುಪಿ, ಸುರೇಂದ್ರ ಆಚಾರ್ಯ, ಸಂಧ್ಯಾ ಸಾಲಿಯನ್ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪುರ ಯುವ ಕಾಂಗ್ರೆಸ್: ಕುಂದಾಪುರ ಯುವ ಕಾಂಗ್ರೆಸ್ ವತಿಯಿಂದ ಸ್ಟಾಪ್ ವೋಟ್ ಚೋರಿ ಸ್ಟಿಕರ್ ಅಭಿಯಾನಕ್ಕೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಛೇರಿಯ ಮುಂಭಾಗದಲ್ಲಿ ಚಾಲನೆ ನೀಡಲಾಯಿತು.
ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಪ್ರಮೋದ್ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಕ್ಷೀತ್ ಶೆಟ್ಟಿ ಕಾಳವಾರ, ಪಕ್ಷದ ಮುಖಂಡರಾದ ಗಣೇಶ್ ಶೇರಿಗಾರ್, ಸಲಾಂ ತೆಕ್ಕಟ್ಟೆ, ಆಶಾ ಕರ್ವೆಲ್ಲೋ, ಅಶೋಕ್ ಸುವರ್ಣ, ಸುನೀಲ್ ಪೂಜಾರಿ ಕೋಡಿ, ನಿತೀಶ್ ಡಿಸೋಜ ಕೋಣಿ, ನಿನಾದ್ ಶೆಟ್ಟಿ, ರವೀಂದ್ರ ಶೆಟ್ಟಿ , ಕುಂದಾಪುರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಜಿತ್ ಪೂಜಾರಿ ಹೇರಿಕುದ್ರು ಮೊದಲಾದವರು ಉಪಸ್ಥಿತರಿದ್ದರು.







