ಕರ್ನಾಟಕಕ್ಕೆ 50ರ ಸಂಭ್ರಮ; ಕನ್ನಡ ತೇರಿಗೆ ಭಟ್ಕಳದಲ್ಲಿ ಸ್ವಾಗತ

ಭಟ್ಕಳ: ಮೈಸೂರು ರಾಜ್ಯವು ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ’ಕರ್ನಾಟಕ ಸಂಭ್ರಮ 50 ರ ಜ್ಯೋತಿ” ರಥ ಯಾತ್ರೆಯು ಕರ್ನಾಟಕ ರಾಜ್ಯಾದಾದ್ಯಂತ ಸಂಚರಿಸುತ್ತಿದ್ದು ರವಿವಾರ ಭಟ್ಕಳಕ್ಕೆ ಆಗಮಿ ಸಿದ್ದ ರಥ ಯಾತ್ರೆಗೆ ತಾಲೂಕಾಡಳಿತಂದ ಇಲ್ಲಿನ ಶಮ್ಸುದ್ದೀನ್ ವೃತ್ತದಲ್ಲಿ ಆದ್ದೂರಿಯಾಗಿ ಸ್ವಾಗತಿಸಲಾಯಿತು.
ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತೆ ಡಾ. ನಯನಾ, ತಹಸೀಲ್ದಾರ್ ಅಶೋಕ ಭಟ್, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ವೆಂಕಟೇಶ ನಾಯಕ, ಪುರಸಭಾ - ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ಈ ನಿರ್ದೇಶಕಿ ಗೀತಾ ಹೆಗಡೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪಿ.ಆರ್. ನಾಯ್ಕ, ಭಟ್ಕಳ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ, ಶ್ರೀಧರ ಈ ಶೇಟ್, ನಾರಾಯಣ ನಾಯ್ಕ, ಶಂಭು ಹೆಗಡೆ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಕನ್ನಡಪ್ರೇಮಿಗಳು ಉಪಸ್ಥಿತರಿದ್ದರು.
ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಭಟ್ಕಳಕ್ಕೆ ಆಗಮಿಸಿದ ರಥಯಾತ್ರೆ ಭಾನುವಾರ ಭಟ್ಕಳದ ವಿವಿಧ ಭಾಗಗಳಲ್ಲಿ ಸಂಚರಿ ಸಿದ್ದು ಸಂಜೆ ಮುರುಢೇಶ್ವರಕ್ಕೆ ಸಾಗಿತು. ಸೋಮವಾರ ಬೆಳಿಗ್ಗೆ ಭಟ್ಕಳದಿಂದ ಹೊನ್ನಾವರ ತಾಲೂಕಿಗೆ ರಥಯಾತ್ರೆಗೆ ಬೀಳ್ಕೊಡಲಾಯಿತು.





