ಹೊನ್ನಾವರ: ಆಝಾನ್ ಕೊಡುತ್ತಿದ್ದ ವೇಳೆ ಕುಸಿದು ಬಿದ್ದು ವ್ಯಕ್ತಿ ನಿಧನ

ಹೊನ್ನಾವರ, ಜೂ.9: ಆಝಾನ್ ಕೊಡುತ್ತಿದ್ದ ವೇಳೆ ವ್ಯಕ್ತಿಯೋರ್ವರು ಕುಸಿದು ಬಿದ್ದು ಮೃತಪಟ್ಟ ಘಟನೆ ಮಂಗಳವಾರ ಸಂಜೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಮಸೀದಿಯಲ್ಲಿ ನಡೆದಿದೆ.
ಮೃತರನ್ನು ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕಾಜೆ ನಿವಾಸಿ ಅಬ್ದುಲ್ ಲತೀಫ್ ಮದನಿ (57) ಎಂದು ಗುರುತಿಸಲಾಗಿದೆ.
ಅಬ್ದುಲ್ ಲತೀಫ್ ಮದನಿ ಅವರು ಕಳೆದ ಒಂದು ವರ್ಷದಿಂದ ಮಸೀದಿಯಲ್ಲಿ ಮುಅಲ್ಲಿಮ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಮಸೀದಿಯ ಮುಅದ್ಸಿನ್ ರಜೆಯಲ್ಲಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಅಸರ್ ನಮಾಝ್‌ನ ಆಝಾನ್ ಕೊಡುತ್ತಿದ್ದರು. ಈ ವೇಳೆ ಏಕಾಏಕಿ ಕುಸಿದು ಬಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಬ್ದುಲ್ ಲತೀಫ್ ಮದನಿ ಅವರ ನಿಧನಕ್ಕೆ ಮುಹಿದ್ದೀನ್ ಜಾಮಿಯಾ ಮಸೀದಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಸಂತಾಪ ಸೂಚಿಸಿದ್ದಾರೆ.
Next Story




