12 ವರ್ಷಕ್ಕೆ ಮೊದಲು ಮಕ್ಕಳ ಕೈಗೆ ಸ್ಮಾರ್ಟ್‌ಫೋನ್ ನೀಡಿದರೆ ಆರೋಗ್ಯ ಸಮಸ್ಯೆ ಕಾಡಲಿದೆ!

ಮಕ್ಕಳ ಕೈಗೆ ಫೋನ್ ಕೊಡುವ ಸರಿಯಾದ ವಯಸ್ಸು ಯಾವುದು ಎನ್ನುವುದು ಪೋಷಕರಿಗೆ ಇಂದಿಗೂ ಗೊಂದಲದ ವಿಷಯವಾಗಿದೆ. ಮಕ್ಕಳನ್ನು ಇನ್‌ಫ್ಲೂಯೆನ್ಸರ್ ಆಗಿ ವೀಡಿಯೋ ಬ್ಲಾಗ್‌ಗಳಲ್ಲಿ ತೋರಿಸುವುದು ಅಥವಾ ಅಂತಹ ಕ್ರಿಯೆಗಳಿಗೆ ಉತ್ತೇಜಿಸುವ ಹೆತ್ತವರು ಅವರ ಆರೋಗ್ಯವನ್ನು ಕಡೆಗಣಿಸಿರುತ್ತಾರೆ!
ರಚನಾಗೆ ಇನ್ನೂ ಎರಡು ವರ್ಷ ತುಂಬಿಲ್ಲ. ಆದರೆ ಫೋನ್ ಕಂಡರೆ ಸಾಕು ರಚ್ಚೆ ಹಿಡಿದು ಅಳುತ್ತಾಳೆ. ಫೋನ್ ಕೈಗೆ ಕೊಟ್ಟರೆ ಊಟ ಸೇರುವುದು. ಆದರೆ ಚಿಕ್ಕ ಮಕ್ಕಳಿಗೆ ಹೀಗೆ ಫೋನ್ ಆಮಿಷ ತೋರಿಸಿ ಊಟ ಮಾಡಿಸುವುದು ಅಥವಾ ಇತರ ಕೆಲಸಗಳನ್ನು ಮಾಡಿಸಿಕೊಳ್ಳುವುದು ಎಷ್ಟು ಸರಿ? ಯಾವ ವಯಸ್ಸಿನಲ್ಲಿ ಮಕ್ಕಳ ಕೈಗೆ ಫೋನ್ ಕೊಡಬಹುದು? ಮಕ್ಕಳ ಕೈಗೆ ಫೋನ್ ಕೊಡುವ ಸರಿಯಾದ ವಯಸ್ಸು ಯಾವುದು ಎನ್ನುವುದು ಪೋಷಕರಿಗೆ ಇಂದಿಗೂ ಗೊಂದಲದ ವಿಷಯವಾಗಿದೆ. ಮಕ್ಕಳನ್ನು ಇನ್‌ಫ್ಲೂಯೆನ್ಸರ್ ಆಗಿ ವೀಡಿಯೋ ಬ್ಲಾಗ್‌ಗಳಲ್ಲಿ ತೋರಿಸುವುದು ಅಥವಾ ಅಂತಹ ಕ್ರಿಯೆಗಳಿಗೆ ಉತ್ತೇಜಿಸುವ ಹೆತ್ತವರು ಸಾಕಷ್ಟಿದ್ದಾರೆ.
12ರ ವಯಸ್ಸಿಗೆ ಸ್ಮಾರ್ಟ್‌ಫೋನ್ ಪಡೆದರೆ ಆರೋಗ್ಯ ಸಮಸ್ಯೆ
ಸೋಮವಾರ ಜರ್ನಲ್ ಪೀಡಿಯಾಟ್ರಿಕ್ಸ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಕಂಡುಬಂದಿರುವ ಪ್ರಕಾರ 12 ವಯಸ್ಸಿನೊಳಗೆ ಸ್ಮಾರ್ಟ್‌ಫೋನ್ ಬಳಸದ ಮಕ್ಕಳಿಗೆ ಹೋಲಿಸಿದರೆ ಸ್ಮಾರ್ಟ್‌ಫೋನ್ ಹೊಂದಿರುವ ಮಕ್ಕಳಲ್ಲಿ ಖಿನ್ನತೆ, ಬೊಜ್ಜು ಮತ್ತು ನಿದ್ರಾರಾಹಿತ್ಯದ ಸಮಸ್ಯೆ ಹೆಚ್ಚಾಗಿರಲಿದೆ. ಸಂಶೋಧಕರು 10,500ಕ್ಕೂ ಹೆಚ್ಚು ಮಕ್ಕಳನ್ನು ಅಧ್ಯಯನ ನಡೆಸಿದ್ದರು. ದೀರ್ಘಕಾಲೀನ ಸಮಯದಲ್ಲಿ ಅಮೆರಿಕದ ಮಕ್ಕಳ ಮೆದುಳಿನ ಮೇಲೆ ಸ್ಮಾರ್ಟ್‌ಫೋನ್ ಬಳಕೆಯ ಪರಿಣಾಮವನ್ನು ಈ ಅಧ್ಯಯನ ನಡೆಸಿದೆ. 12 ವರ್ಷಗಳ ಒಳಗೆ ಸ್ಮಾರ್ಟ್‌ಫೋನ್ ಪಡೆದ ಮಕ್ಕಳಲ್ಲಿ ಬೊಜ್ಜು ಮತ್ತು ನಿದ್ರಾರಾಹಿತ್ಯದ ಸಮಸ್ಯೆ ಹೆಚ್ಚಿದ್ದವು. ಮಕ್ಕಳ ಮಾನಸಿಕ ಆರೋಗ್ಯದ ಮೇಲೂ ಫೋನ್ ನಕಾರಾತ್ಮಕ ಪರಿಣಾಮ ಬೀರಿರುವುದು ಕಂಡುಬಂದಿದೆ.
ಫಿಲಡೆಲ್ಫಿಯಾದ ಮಕ್ಕಳ ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯ ತಜ್ಞರಾಗಿರುವ ಡಾ ರ್ಯಾನ್ ಬಾರ್ಜಿಲೇ ಪ್ರಕಾರ, “ಮಕ್ಕಳ ಕೈಗೆ ಫೋನ್ ಕೊಡುವಾಗ ಅದು ಅವರಿಗೆ ಅಗತ್ಯವೇ ಇಲ್ಲವೇ ಎನ್ನುವುದನ್ನು ಪೋಷಕರು ಗಮನಿಸಬೇಕು. 12 ವರ್ಷದೊಳಗಿನ ವಯಸ್ಸು ಮತ್ತು 16ರ ವಯಸ್ಸಿನಲ್ಲಿ ಬಹಳ ಅಂತರವಿದೆ. 40-42ರ ವಯಸ್ಸಿನಂತೆ ಇರುವುದಿಲ್ಲ”
ಹದಿಹರೆಯ ಬಹಳ ಸೂಕ್ಷ್ಮ ಸಮಯವಾಗಿದ್ದು, ನಿದ್ರೆ ಅಥವಾ ಮಾನಸಿಕ ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸವಾದರೂ ದೀರ್ಘ ಸಮಯದ ಕಾಲ ಅದರ ಪರಿಣಾಮವನ್ನು ಅವರು ಅನುಭವಿಸಬೇಕಾಗಿ ಬರಬಹುದು. ಸ್ಮಾರ್ಟ್‌ಫೋನ್ ಹೊಂದಿದ ಹದಿಹರೆಯದ ಮಕ್ಕಳು ಸಾಮಾಜಿಕವಾಗಿ ಹೆಚ್ಚು ಸಕ್ರಿಯ ಚಟುವಟಿಕೆಗಳಲ್ಲಿ ಭಾಗವಹಿಸದೆ ಇರಬಹುದು ಎಂದು ತಜ್ಞರು ಅಧ್ಯಯನದ ನಂತರ ಅಭಿಪ್ರಾಯುಪಟ್ಟಿದ್ದಾರೆ.
ಶೇ 50ಕ್ಕೂ ಮೀರಿದ ಪ್ರಮಾಣದಲ್ಲಿ ಸ್ಮಾರ್ಟ್‌ಫೋನ್‌ನಲ್ಲಿ ಕಳೆದ ಮಕ್ಕಳು
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾಗಿರುವ ಪಿಎಂಸಿ ಅಧ್ಯಯನದ ಪ್ರಕಾರ ಅಧ್ಯಯನದಲ್ಲಿ ಬಳಸಿದ ಒಟ್ಟು ಮಾದರಿಯಲ್ಲಿ ಸ್ಮಾರ್ಟ್‌ಫೋನ್ ವ್ಯಸನದ ಹರಡುವಿಕೆಯ ಪ್ರಮಾಣ (ಶೇ 53.3%) ತುಲನಾತ್ಮಕವಾಗಿ ಹೆಚ್ಚಿತ್ತು. ಭಾಗವಹಿಸುವವರು ದಿನಕ್ಕೆ 6.85 (4.62) ಗಂಟೆಗಳ ಕಾಲ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಕಳೆದಿದ್ದರು. ಇದು ಕೋವಿಡ್ ಸಾಂಕ್ರಾಮಿಕ ಅವಧಿಗೆ ಹಿಂದಿನ ಸಮಯಕ್ಕೆ ಹೋಲಿಸಿದರೆ ಶೇ 53.86ರಷ್ಟು ಹೆಚ್ಚಾಗಿದೆ. ಪ್ರಾಥಮಿಕ ಸ್ಮಾರ್ಟ್‌ಫೋನ್ ಬಳಕೆಯು ಸಾಮಾಜಿಕ ಜಾಲತಾಣ (ಶೇ 77.9), ವೆಬ್-ಸರ್ಫಿಂಗ್ (ಶೇ 53.3) ಮತ್ತು ಕ್ಯಾಮೆರಾ ಚಟುವಟಿಕೆಗಳು (ಶೇ 50.9) ಎಂದು ಅಧ್ಯಯನ ಕಂಡುಕೊಂಡಿದೆ.
ಕಣ್ಣು, ತಲೆನೋವು, ನಿದ್ರಾರಾಹಿತ್ಯದ ಸಮಸ್ಯೆಗಳು
ಸ್ಮಾರ್ಟ್‌ಫೋನ್ ಬಳಕೆಗೆ ಸಂಬಂಧಿಸಿದ ಅಸ್ವಸ್ಥತೆ ಹೆಚ್ಚಾಗಿ ಕಣ್ಣುಗಳಲ್ಲಿ (ಶೇ 39.7) ಮತ್ತು ಕುತ್ತಿಗೆಯಲ್ಲಿ (ಶೇ 39.1) ಕಂಡುಬರುತ್ತದೆ ಎಂದು ವರದಿಯಾಗಿದೆ. ಸ್ಮಾರ್ಟ್‌ಫೋನ್ ವ್ಯಸನ ಮತ್ತು ಕಣ್ಣುಗಳು, ಕುತ್ತಿಗೆ, ಮಣಿಕಟ್ಟುಗಳು, ಭುಜಗಳು ಮತ್ತು ಮೇಲಿನ ಬೆನ್ನಿನಲ್ಲಿನ ಅಸ್ವಸ್ಥತೆಯ ನಡುವೆ ಸಕಾರಾತ್ಮಕ ಸಂಬಂಧ ಕಂಡುಬಂದಿದೆ ಎಂದು ಅಧ್ಯಯನ ಹೇಳಿದೆ.
ಇಂಟರ್‌ನ್ಯಾಷನಲ್ ಜರ್ನಲ್ ಫಾರ್ ಕಮ್ಯುನಿಟಿ ಮೆಡಿಸಿನ್ ಮತ್ತು ಪಬ್ಲಿಕ್ ಹೆಲ್ತ್ ನಡೆಸಿದ ಮತ್ತೊಂದು ಅಧ್ಯಯನದಲ್ಲಿ 5-12ರ ವಯಸ್ಸಿನ ಮಕ್ಕಳಲ್ಲಿ ಶೇ 42.3ರಷ್ಟು ಫೋನ್ ವ್ಯಸನ ಕಂಡುಬಂದಿದೆ. ಶಿಕ್ಷಿತ ಮಧ್ಯಮ ವರ್ಗದ ಕುಟುಂಬಗಳ ಮಕ್ಕಳಲ್ಲಿ ಫೋನ್ ವ್ಯಸನದಿಂದಾಗಿ ಕಣ್ಣಿನ ಸಮಸ್ಯೆ, ತಲೆನೋವು, ಗಮನ ಕೇಂದ್ರೀಕರಿಸುವಲ್ಲಿ ವಿಫಲವಾಗುವುದು, ನಿದ್ರಾ ರಾಹಿತ್ಯ ಮೊದಲಾದ ಸಮಸ್ಯೆ ಕಂಡುಬಂದಿದೆ ಎಂದು ಅಧ್ಯಯನ ವರದಿ ಹೇಳಿದೆ







