ಭಾರತದಲ್ಲಿ ಚಲಾವಣೆಯಲ್ಲಿತ್ತು 10,000 ರೂ.ನೋಟು!

ನೋಟು ನಿಷೇಧದ ಬಳಿಕ ಪರಿಚಯಿಸಲಾಗಿದ್ದ 2,000 ರೂ.ನೋಟು ಭಾರತದ ಅತ್ಯಂತ ಹೆಚ್ಚಿನ ಮುಖಬೆಲೆಯ ನೋಟು ಎಂದು ಹೆಚ್ಚಿನವರು ಭಾವಿಸಿದ್ದಾರೆ
ಆದರೆ 5,000 ರೂ. ಮತ್ತು 10,000 ರೂ.ನಂತಹ ಇನ್ನೂ ಹೆಚ್ಚಿನ ಮುಖಬೆಲೆಗಳ ನೋಟುಗಳು ಭಾರತದಲ್ಲಿ ಚಲಾವಣೆಯಲ್ಲಿತ್ತು
ಭಾರತದ 10,000 ರೂ.ನೋಟು ಸ್ವಾತಂತ್ರ್ಯಪೂರ್ವ ಯುಗದಲ್ಲಿ ತನ್ನ ಮೂಲವನ್ನು ಹೊಂದಿದೆ
1938ರಲ್ಲಿ ಮೊದಲ 10,000 ರೂ.ನೋಟನ್ನು ವಿತರಿಸಿದ್ದ ಆರ್‌ಬಿಐ
ಇದು ದೇಶದ ಇತಿಹಾಸದಲ್ಲಿ ಚಲಾವಣೆಗೊಂಡ ಅತ್ಯಂತ ಹೆಚ್ಚಿನ ಮುಖಬೆಲೆ ನೋಟು
ಮುಖ್ಯವಾಗಿ ಉದ್ಯಮಿಗಳು ಮತ್ತು ವ್ಯಾಪಾರಿಗಳು ವಹಿವಾಟುಗಳಿಗಾಗಿ ಬಳಸುತ್ತಿದ್ದರು
ದ್ವಿತೀಯ ಮಹಾಯುದ್ಧದ ಸಮಯದಲ್ಲಿ 10,000 ರೂ.ನೋಟನ್ನು ರದ್ದುಗೊಳಿಸಲು ಬ್ರಿಟಿಷ್ ಸರಕಾರ ನಿರ್ಧಾರ
ಆದರೆ 1954ರಲ್ಲಿ 10,000 ರೂ.ನೋಟ್‌ ಜೊತೆಗೆ 5,000 ರೂ.ನಂತಹ ಇತರ ದೊಡ್ಡ ಮುಖಬೆಲೆಗಳ ಜೊತೆಗೆ ಚಲಾವಣೆಯಲ್ಲಿ ಮುಂದುವರಿದಿತ್ತು.
1978ರಲ್ಲಿ ಸ್ವತಂತ್ರ ಭಾರತದ ಸರಕಾರವು 5,000 ರೂ.ನೋಟಿನ ಜೊತೆಗೆ 10,000 ರೂ.ನೋಟನ್ನು ಮತ್ತೆ ನಿಷೇಧಿಸಲು ನಿರ್ಧರಿಸಿತ್ತು