43 ಕೋಟಿ ರೂ. ನೀಡಿದರೆ ಅಮೆರಿಕ ʼಗೋಲ್ಡ್ ಕಾರ್ಡ್‌ʼ!

ಶ್ರೀಮಂತ ವಿದೇಶಿಯರಿಗೆ ಟ್ರಂಪ್ ಹೊಸ ಯೋಜನೆ
ವಿಶ್ವದ ಶ್ರೀಮಂತ ವಲಸಿಗರಿಗೆ ಅಮೆರಿಕ ಆಶ್ರಯ ನೀಡಲು ಯೋಜಿಸುತ್ತಿದೆ ಎಂದ ಟ್ರಂಪ್
ʼಗೋಲ್ಡ್ ಕಾರ್ಡ್ ಪಡೆಯಲು 5 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 43 ಕೋಟಿ 54 ಲಕ್ಷ ಶುಲ್ಕ ಪಾವತಿಸಬೇಕು
ಈ ಕಾರ್ಡ್ ಪಡೆದರಿಗೆ ಅಮೆರಿಕದಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ಹಕ್ಕು ದೊರೆಯಲಿದೆ
ʼಗೋಲ್ಡ್ ಕಾರ್ಡ್ʼ ಸ್ವಲ್ಪಮಟ್ಟಿಗೆ ಹಸಿರು ಕಾರ್ಡ್‌ನಂತಿದೆ. ಆದರೆ ಮತ್ತಷ್ಟು ನವೀಕರಣದೊಂದಿಗೆ ಬರಲಿದೆ.
ಇದು ಜನರಿಗೆ ಅಮೆರಿಕದ ಪೌರತ್ವದ ಹಾದಿಯನ್ನು ಮತ್ತಷ್ಟು ಸಲಭಗೊಳಿಸಲಿದೆ
ರಷ್ಯಾದಿಂದ ಹಿಡಿದು ಭಾರತದ ಪ್ರಭಾವಿ ಉದ್ಯಮಿಗಳವರೆಗೆ ಶ್ರೀಮಂತ ವ್ಯಕ್ತಿಗಳು ʼಗೋಲ್ಡ್ ಕಾರ್ಡ್ʼ ಖರೀದಿದಾರರಲ್ಲಿರಬಹುದು ಎಂದ ಟ್ರಂಪ್