ವೈಭವ್ ಸೂರ್ಯವಂಶಿ ಪುಡಿಗಟ್ಟಿರುವ ದಾಖಲೆಗಳತ್ತ ಒಂದು ನೋಟ

ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ
ಟಿ-20 ಕ್ರಿಕೆಟ್ ಇತಿಹಾಸದಲ್ಲಿ 50 ರನ್ ಗಳಿಸಿದ ಕಿರಿಯ ಕ್ರಿಕೆಟಿಗ(14 ವರ್ಷ, 32 ದಿನಗಳು)
ಟಿ-20 ಕ್ರಿಕೆಟ್ ಇತಿಹಾಸದಲ್ಲಿ 100 ರನ್ ಗಳಿಸಿದ ಕಿರಿಯ ಕ್ರಿಕೆಟಿಗ(14 ವರ್ಷ, 32 ದಿನಗಳು)
ಐಪಿಎಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಕಿರಿಯ ವಯಸ್ಸಿನ ಆಟಗಾರ. ಮುಜೀಬ್‌ವುರ‌್ರಹ್ಮಾನ್ ಹಾಗೂ ವಾಶಿಂಗ್ಟನ್ ಸುಂದರ್ ದಾಖಲೆ(14 ವರ್ಷ, 32 ದಿನ)ಪತನ.
ಬ್ಯಾಟಿಂಗ್ ದಾಖಲೆಗಳು
ಐಪಿಎಲ್‌ನಲ್ಲಿ ವೇಗದ ಶತಕ ಗಳಿಸಿದ ಮೊದಲ ಭಾರತೀಯ(35 ಎಸೆತಗಳು)
ಐಪಿಎಲ್ ರನ್ ಚೇಸ್ ವೇಳೆ ವೇಗದ ಶತಕ(35 ಎಸೆತಗಳು)
ಐಪಿಎಲ್ ಶತಕ ಗಳಿಸಲು ಕಡಿಮೆ ಇನಿಂಗ್ಸ್ ತೆಗೆದುಕೊಂಡ ಭಾರತೀಯ ಆಟಗಾರ(3ನೇ ಐಪಿಎಲ್ ಇನಿಂಗ್ಸ್)
ಐಪಿಎಲ್ ಇತಿಹಾಸದಲ್ಲಿ 11 ಓವರ್‌ನೊಳಗೆ ಶತಕ ಗಳಿಸಿದ ಏಕೈಕ ಭಾರತೀಯ
ಕರೀಮ್ ಜನತ್ ಎಸೆದ ಓವರ್‌ರೊಂದರಲ್ಲಿ 30 ರನ್ ಸೂರೆಗೈದರು. ಜನತ್ ತನ್ನ ಚೊಚ್ಚಲ ಐಪಿಎಲ್ ಪಂದ್ಯದ ಮೊದಲ ಓವರ್‌ನಲ್ಲಿ ಗರಿಷ್ಠ ರನ್ ನೀಡಿದ್ದಾರೆ.
ಸಿಕ್ಸ್ ಹಿಟ್ಟಿಂಗ್ ಹಾಗೂ ಪವರ್ ರೆಕಾರ್ಡ್ಸ್
ಐಪಿಎಲ್ ಇನಿಂಗ್ಸ್‌ವೊಂದರಲ್ಲಿ ಕಿರಿಯ ಆಟಗಾರನಿಂದ ಗರಿಷ್ಠ ಸಿಕ್ಸರ್‌ಗಳು(11)
ಐಪಿಎಲ್ ಇನಿಂಗ್ಸ್‌ನಲ್ಲಿ ಭಾರತೀಯ ಆಟಗಾರನಿಂದ ಜಂಟಿ ಗರಿಷ್ಠ ಸಿಕ್ಸರ್(11)
ಐಪಿಎಲ್ ರನ್ ಚೇಸ್ ವೇಳೆ ಗರಿಷ್ಠ ಸಿಕ್ಸರ್‌ಗಳ ಸುರಿಮಳೆ