ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಚೇತೇಶ್ವರ ಪೂಜಾರ ಕುರಿತ ಇಣುಕು ನೋಟ

ಚೇತೇಶ್ವರ ಪೂಜಾರ ಭಾರತ ಕ್ರಿಕೆಟ್ ತಂಡದ ಅತ್ಯಂತ ವಿಶ್ವಾಸಾರ್ಹ ಮತ್ತು ಗೌರವಾನ್ವಿತ ಟೆಸ್ಟ್ ಬ್ಯಾಟರ್ ಗಳಲ್ಲಿ ಒಬ್ಬರು
ರಾಹುಲ್ ದ್ರಾವಿಡ್ ನಂತರ ಭಾರತ ತಂಡದ 'ಆಧುನಿಕ ಮಹಾಗೋಡೆ' ಎಂದು ಕರೆಯಲ್ಪಡುತ್ತಿದ್ದರು.
2010ರಲ್ಲಿ ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆಗೈದಿದ್ದ ಪೂಜಾರ
ದ್ರಾವಿಡ್ ಅವರಿಂದ ತೆರವಾಗಿದ್ದ 3ನೇ ಕ್ರಮಾಂಕದಲ್ಲಿ ದಶಕಗಳ ಕಾಲ ಆಡಿದ್ದಾರೆ
ಅವರು 103 ಟೆಸ್ಟ್ ಪಂದ್ಯಗಳಲ್ಲಿ 7,195 ರನ್ ಗಳಿಸಿದ್ದಾರೆ
ಟೆಸ್ಟ್ ಇನ್ನಿಂಗ್ಸ್ ವೊಂದರಲ್ಲಿ 500ಕ್ಕೂ ಹೆಚ್ಚು ಎಸೆತಗಳನ್ನು ಎದುರಿಸಿದ ಏಕೈಕ ಭಾರತೀಯ ದಾಂಡಿಗ
ವೃತ್ತಿ ಬದುಕಿನಲ್ಲಿ 15,000ಕ್ಕೂ ಅಧಿಕ ಎಸೆತಗಳನ್ನು ಎದುರಿಸಿದ್ದಾರೆ
ಹಿಂದಿನ 40 ವರ್ಷಗಳಲ್ಲಿ ಟೆಸ್ಟ್ ಪಂದ್ಯದ ಎಲ್ಲ ಐದು ದಿನಗಳ ಕಾಲ ಬ್ಯಾಟ್ ಮಾಡಿದ ಏಕೈಕ ಭಾರತೀಯ
ಆಸ್ಟ್ರೇಲಿಯ ಹಾಗು ಇಂಗ್ಲೆಂಡ್ ನಲ್ಲಿ ಭಾರತದ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಪೂಜಾರ
6 ಬಾರಿ ಪಂದ್ಯಶ್ರೇಷ್ಠ ಮತ್ತು 2 ಬಾರಿ ಸರಣಿಶ್ರೇಷ್ಠ ಪ್ರಶಸ್ತಿಗಳನ್ನು ಪಡೆದಿದ್ದರು