ಇನ್ನು ಮುಂದೆ‌ 5 ರಿಂದ 17 ವರ್ಷದೊಳಗಿನ ಮಕ್ಕಳ ಆಧಾರ್ ಕಾರ್ಡ್ ಅಪ್‌ ಡೇಟ್ ಉಚಿತ

ಮಕ್ಕಳಿಗೆ ನೀಡಲಾಗುವ ‘ಬಾಲ’ ಅಥವಾ ನೀಲಿ ಆಧಾರ್ ಕಾರ್ಡ್‌ ಗಳ ಬಯೋಮೆಟ್ರಿಕ್ ಅನ್ನು ಕಡ್ಡಾಯವಾಗಿ ಅಪ್‌ ಡೇಟ್ ಮಾಡುವುದಕ್ಕೆ ವಿಧಿಸಲಾಗುವ ಎಲ್ಲಾ ಶುಲ್ಕ ರದ್ದು
ವಿಶಿಷ್ಟ ಗುರುತುಚೀಟಿ ಪ್ರಾಧಿಕಾರ ಅಧಿಕೃತ ಹೇಳಿಕೆ
ಐದು ವರ್ಷ ಪ್ರಾಯದೊಳಗಿನ ಮಗುವನ್ನು ಆಧಾರ್‌ ಗೆ ನೋಂದಾಯಿಸಿಕೊಳ್ಳುವಾಗ ಅದರ ಭಾವಚಿತ್ರ, ಹೆಸರು, ಹುಟ್ಟಿದ ದಿನಾಂಕ, ಲಿಂಗ, ವಿಳಾಸ ಹಾಗೂ ಜನ್ಮ ಪ್ರಮಾಣಪತ್ರವನ್ನು ಒದಗಿಸಬೇಕಾಗುತ್ತದೆ.
ಆದರೆ ಈ ಪ್ರಾಯದಲ್ಲಿ ಮಕ್ಕಳಿಗೆ ಪ್ರಬುದ್ಧತೆಯಿರದ ಕಾರಣ ಅವರಿಂದ ಬಯೋಮೆಟ್ರಿಕ್ ಪಡೆದುಕೊಳ್ಳಲಾಗುವುದಿಲ್ಲ.
5ರಿಂದ 17 ವರ್ಷದೊಳಗಿನವರಿಗೆ ನಡೆಸಲಾಗುವ ಮೊದಲ ಹಾಗೂ ಎರಡನೇ ಕಡ್ಡಾಯ ಬಯೋಮೆಟ್ರಿಕ್ ಅಪ್‌ ಡೇಟ್ (ಎಂಬಿಯು) ಸಂಪೂರ್ಣ ಉಚಿತ
6 ಕೋಟಿಗೂ ಅಧಿಕ ಮಕ್ಕಳಿಗೆ ಪ್ರಯೋಜನ
ಯುಐಡಿಎಐನ ಅಧಿಕೃತ ವೆಬ್‌ ಸೈಟ್‌ ನಿಂದ ವಿವರಗಳನ್ನು ಪಡೆಯಬಹುದಾಗಿದೆ