ಗಾಝಾದ ಪತ್ರಕರ್ತರ ರಕ್ಷಣೆಗೆ ಅಲ್-ಜಝೀರಾ ಕರೆ

ಗಾಝಾದಲ್ಲಿರುವ ಪತ್ರಕರ್ತರಿಗೆ ತೀವ್ರ ಸಂಕಷ್ಟ
ದೈಹಿಕ ಹಾನಿ, ಆಹಾರದ ತೀವ್ರ ಕೊರತೆ, ನಿರಂತರ ಬಾಂಬ್ ದಾಳಿಗಳ ನಡುವೆ ಪತ್ರಕರ್ತರ ಬದುಕು ದುಸ್ತರ
ದಾಳಿಗಳ ಹೊರತಾಗಿಯೂ, ಸತ್ಯವನ್ನು ಜಗತ್ತಿಗೆ ತಲುಪಿಸುತ್ತಿರುವ ಧೈರ್ಯಶಾಲಿ ಮಾಧ್ಯಮ ವೃತ್ತಿಪರರು
ಪತ್ರಕರ್ತರ ರಕ್ಷಣೆಗೆ ಜಾಗತಿಕ ಮಾಧ್ಯಮ ಸಂಸ್ಥೆಗಳು, ಮಾನವ ಹಕ್ಕು ಸಂಘಟನೆಗಳು ಮತ್ತು ಕಾನೂನು ಸಂಸ್ಥೆಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಅಲ್-ಜಝೀರಾ ಕರೆ
ಗಾಝಾದಲ್ಲಿ ಸುಮಾರು 20 ಲಕ್ಷ ಜನರಿಗೆ ಜೀವನೋಪಾಯ ಸೌಲಭ್ಯಗಳಾದ ಆಹಾರ, ನೀರು, ವೈದ್ಯಕೀಯ ನೆರವು ದೊರೆಯದ ಸ್ಥಿತಿ ನಿರ್ಮಾಣ
ಈ ಪರಿಸ್ಥಿತಿಯ ನಡುವೆ ತಮ್ಮ ಜೀವದ ಹಂಗು ತೊರೆದು ಗಾಝಾದ ಜನರ ನೋವು ಜಗತ್ತಿಗೆ ತಲುಪಿಸುವ ಕೆಲಸದಲ್ಲಿ ತೊಡಗಿರುವ ಪತ್ರಕರ್ತರು
ಇದೀಗ, ಸ್ವತಃ ಅವರೇ ತಮ್ಮ ಬದುಕಿನ ಉಳಿವಿಗಾಗಿ ಹೋರಾಟ ಮಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ
ಇಸ್ರೇಲ್ ದಾಳಿಗಳಿಂದಾಗಿ ಅಕ್ಟೋಬರ್ 2023ರಿಂದ ಇಲ್ಲಿಯವರೆಗೆ ಅಲ್ ಜಝೀರಾದ ಐವರು ಪತ್ರಕರ್ತರು ಮೃತಪಟ್ಟಿದ್ದಾರೆ