ಚಿನ್ನದ ಬೆಲೆಯಲ್ಲಿ ಸಾರ್ವಕಾಲಿಕ ದಾಖಲೆಯ ಏರಿಕೆ

1 ಲಕ್ಷ ರೂ. ದಾಟಿದ ಚಿನ್ನದ ಬೆಲೆ
24 ಕ್ಯಾರೆಟ್‌ ನ 10 ಗ್ರಾಂ ಚಿನ್ನದ ಬೆಲೆ 1 ಲಕ್ಷ ರೂ. ದಾಟಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ.
ಮಂಗಳವಾರ ರೂ. 2,048 ಏರಿಕೆಯಾಗುವ ಮೂಲಕ ಒಂದು ಗ್ರಾಂಗೆ ರೂ.10,135 ತಲುಪಿದೆ
10 ಗ್ರಾಂಗೆ 1,01,350 ರೂ. ಆಗಿದೆ.
ಬೆಂಗಳೂರಿನಲ್ಲಿ ಮಂಗಳವಾರ 22 ಕ್ಯಾರೆಟ್ ಚಿನ್ನ ಒಂದು ಗ್ರಾಂ.ಗೆ ದರ 9,290ರೂ.ನಂತೆ ಮಾರಾಟವಾಗಿದೆ.
ಅದರಂತೆ ಒಂದು ಪವನ್ ಅಂದರೆ 8ಗ್ರಾಂ.ಚಿನ್ನ 74,320ರೂ.ಗೆ ಮಾರಾಟವಾಗಿದೆ.
ದಿಲ್ಲಿಯಲ್ಲಿ ಮಂಗಳವಾರ 22 ಕ್ಯಾರೆಟ್ ಚಿನ್ನ 1ಗ್ರಾಂಗೆ ದರ 9,305ರೂ.ನಂತೆ ಮಾರಾಟವಾಗಿದೆ.
ಅದರಂತೆ 8ಗ್ರಾಂ. ಚಿನ್ನ 74,440ರೂ.ಗೆ ಮಾರಾಟವಾಗುತ್ತಿದೆ.