ಅಮೆರಿಕದ ಕಾರ್ಡಿನಲ್ ರಾಬರ್ಟ್ ಪ್ರೇವೋಸ್ಟ್ ಹೊಸ ಪೋಪ್

ಹದಿನಾಲ್ಕನೇ ಲಿಯೊ ಎಂಬ ಹೆಸರು ಆಯ್ಕೆ
ಹದಿನಾಲ್ಕನೇ ಲಿಯೊ ಅಮೇರಿಕಾದಿಂದ ಆಯ್ಕೆಯಾದ ಪ್ರಪ್ರಥಮ ಪೋಪ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ
ಇವರು ಪೆರು ದೇಶದ ಪೌರತ್ವವನ್ನೂ ಪಡೆದಿರುವುದರಿಂದ ಲ್ಯಾಟಿನ್ ಅಮೆರಿಕದಿಂದ ಆಯ್ಕೆಯಾದ ಪೋಪ್ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ
ವ್ಯಾಟಿಕನ್ ನ ಸಿಸ್ಟೀನ್ ಚಾಪೆಲ್ ನಲ್ಲಿ ಸೇರಿದ್ದ ಕಾರ್ಡಿನಲ್ ಗಳು ಹೊಸ ಪೋಪ್ ಅನ್ನು ಆಯ್ಕೆ ಮಾಡಿದ್ದಾರೆ
ಹೊಸ ಪೋಪ್ ಅನ್ನು ಆಯ್ಕೆಯನ್ನು ಸಾಂಕೇತಿಸುವ ಬಿಳಿ ಹೊಗೆ ಚಿಮಣಿ ಮೂಲಕ ಹೊರ ಬಂದಿದೆ