ಕೇರಳದಲ್ಲಿ ಹೆಚ್ಚುತ್ತಿರುವ ‘ಮೆದುಳು ತಿನ್ನುವ ಅಮೀಬಾ’ ಕಾಯಿಲೆ

ಅಮೀಬಿಕ್ ಮೆನಿಂಗೊ ಎನ್ಸೆಫಲೈಟಿಸ್ ಎಂಬುದು ಇದರ ವೈದ್ಯಕೀಯ ಹೆಸರು
ಇದು ನೈಗ್ಲೇರಿಯಾ ಫೌಲೆರಿ ಎಂಬ ಸೂಕ್ಷ್ಮಜೀವಿಯಿಂದ ಬರುವ ಒಂದು ರೀತಿಯ ಮೆದುಳಿನ ಸೋಂಕು
ಈ ಸೂಕ್ಷ್ಮಜೀವಿಗಳು ನಿಂತಿರುವ ನೀರು, ಸರೋವರಗಳು, ನದಿಗಳು ಮತ್ತು ಸರಿಯಾಗಿ ಕ್ಲೋರಿನ್ ಹಾಕದ ಸ್ವಿಮ್ಮಿಂಗ್ ಪೂಲ್‌ ಗಳಲ್ಲಿ ವಾಸಿಸುತ್ತವೆ.
ಈ ಅಮೀಬಾ ಬಾಯಿಯ ಬದಲು ಮೂಗಿನ ಮೂಲಕ ದೇಹವನ್ನು ಸೇರುತ್ತದೆ
ಸೋಂಕು ತಗುಲಿದ ಮೊದಲ ಹಂತದಲ್ಲಿ ವಿಪರೀತ ತಲೆನೋವು, ಜ್ವರ, ವಾಕರಿಕೆ ಮತ್ತು ವಾಂತಿ ಕಂಡುಬರುತ್ತದೆ.
ವಿಶ್ವದಾದ್ಯಂತ ಈ ಸೋಂಕಿಗೆ ಒಳಗಾದವರಲ್ಲಿ ಸುಮಾರು ಶೇ. 97ರಷ್ಟು ಜನರು ಸಾವನ್ನಪ್ಪಿದ್ದಾರೆ.
ಈ ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದರೆ, ಆರಂಭಿಕ ಹಂತದಲ್ಲಿ ವೈದ್ಯರ ಚಿಕಿತ್ಸೆಯಿಂದ ಬದುಕುಳಿಯುವ ಸಾಧ್ಯತೆಗಳಿವೆ.