ಚೆಸ್ ಪಟು ಹರಿಕೃಷ್ಣನ್ ಗೆ ಗ್ರ್ಯಾಂಡ್‌ ಮಾಸ್ಟರ್ ಕಿರೀಟ

ಚೆನ್ನೈ ಮೂಲದ ಹರಿಕೃಷ್ಣನ್ ಅವರು ಭಾರತದ 87ನೇ ಗ್ರ್ಯಾಂಡ್‌ ಮಾಸ್ಟರ್ ಬಿರುದು
ಫ್ರಾನ್ಸ್‌ ನಲ್ಲಿ ನಡೆದ ಲಾ ಪ್ಲಾಗ್ನೆ ಅಂತರರಾಷ್ಟ್ರೀಯ ಚೆಸ್ ಕ್ರೀಡಾಕೂಟದಲ್ಲಿ ಕೊನೆಯ ಪಂದ್ಯದಲ್ಲಿ 'ಡ್ರಾ' ಸಾಧಿಸಿದ ಹರಿಕೃಷ್ಣನ್
23ರ ಹರೆಯದ ಹರಿಕೃಷ್ಣನ್ ಅವರು ತರಬೇತುದಾರ ಶ್ಯಾಮ್ ಸುಂದರ್‌ ಅವರಿಂದ ತರಬೇತಿ ಪಡೆದಿದ್ದಾರೆ
ಏಳು ವರ್ಷಗಳಿಂದ ಹರಿಕೃಷ್ಣನ್ ಇಂಟರ್‌ನ್ಯಾಶನಲ್ ಮಾಸ್ಟರ್ ಆಗಿಯೇ ಉಳಿದಿದ್ದರು.
ಕ್ರೀಡಾಕೂಟದಲ್ಲಿ ನಮ್ಮದೇ ಪಿ. ಇನಿಯನ್‌ರೊಂದಿಗೆ ಫೈನಲ್ ಸುತ್ತಿನಲ್ಲಿ ಡ್ರಾ ಸಾಧಿಸಿದ ಹರಿಕೃಷ್ಣನ್ ಕೊನೆಗೂ ಗ್ರ್ಯಾಂಡ್‌ ಮಾಸ್ಟರ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ