ಹವಾಮಾನ ಬದಲಾವಣೆಯಿಂದ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ: ವಿಶ್ವಸಂಸ್ಥೆ ವರದಿ

ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಪ್ರತೀ ವರ್ಷ ಹವಾಮಾನ ಸಂಬಂಧಿತ ಸಮಸ್ಯೆಯಿಂದಾಗಿ ಶಾಲೆಗಳನ್ನು ಮುಚ್ಚಲಾಗುತ್ತಿವೆ.
ಇದರಿಂದ ಮಕ್ಕಳು ಶಾಲೆಯಿಂದ ಹೊರಗುಳಿಯುವಿಕೆಯ ಸಾಧ್ಯತೆಗಳು ಹೆಚ್ಚುತ್ತಿವೆ
ಹವಾಮಾನ ಬದಲಾವಣೆಯಿಂದಾಗಿ ಮಕ್ಕಳು ತಮ್ಮ ಶಾಲಾ ಶಿಕ್ಷಣದ 1.5 ವರ್ಷಗಳನ್ನು ಕಳೆದುಕೊಳ್ಳಬಹುದು ಎಂದ ವರದಿ
ಹವಾಮಾನದ ಒತ್ತಡಗಳಾದ ಉಷ್ಣತೆ, ಕಾಡ್ಗಿಚ್ಚು, ಚಂಡಮಾರುತಗಳು, ಪ್ರವಾಹ, ಬರಗಾಲ, ಕಾಯಿಲೆಗಳು, ಸಮುದ್ರ ಮಟ್ಟ ಹೆಚ್ಚುವುದು, ಇತ್ಯಾದಿಗಳಿಂದ ಶೈಕ್ಷಣಿಕ ಫಲಿತಾಂಶದ ಮೇಲೆ ಗಾಢ ಪರಿಣಾಮ
ಮಕ್ಕಳಿಗೆ ಅತೀ ಹೆಚ್ಚು ಹವಾಮಾನ ಅಪಾಯಗಳನ್ನು ಹೊಂದಿರುವ 33 ದೇಶಗಳಲ್ಲಿ 29 ದುರ್ಬಲ ದೇಶಗಳು
2019ರಲ್ಲಿ ತೀವ್ರ ಹವಾಮಾನ ಘಟನೆಗಳಿಂದ ಹೆಚ್ಚು ಪರಿಣಾಮಕ್ಕೆ ಒಳಗಾದ 10 ದೇಶಗಳಲ್ಲಿ 8 ಕಡಿಮೆ ಅಥವಾ ಮಧ್ಯಮ ಆದಾಯದ ದೇಶಗಳಾಗಿವೆ.
ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಿದ ಪ್ರಗತಿ ವ್ಯರ್ಥವಾಗುವ ಅಪಾಯವಿದೆ ಎಂದ ವಿಶ್ವಸಂಸ್ಥೆಯ ವರದಿ