ಐದು ವರ್ಷಕ್ಕಿಂತ ಕೆಳಗಿನ ಶೇ. 37ರಷ್ಟು ಮಕ್ಕಳಲ್ಲಿ ಕುಬ್ಜತೆ

ಶೇ. 16ರಷ್ಟು ಮಕ್ಕಳು ಕಡಿಮೆ ತೂಕದಿಂದ ಮತ್ತು ಶೇ. 5.4 ರಷ್ಟು ಮಕ್ಕಳು ಕೃಶಕಾಯವನ್ನು ಹೊಂದಿದ್ದಾರೆ ಎಂದ ವರದಿ
ದೇಶದಲ್ಲಿ ಅತೀ ಹೆಚ್ಚಿನ ಕುಂಠಿತ ಬೆಳವಣಿಗೆ ಉತ್ತರ ಪ್ರದೇಶದ (ಶೇ. 48.83) ಮಕ್ಕಳಲ್ಲಿ ಕಂಡುಬಂದಿದೆ.
ಜಾರ್ಖಂಡ್ (ಶೇ.43.26), ಬಿಹಾರ (ಶೇ.42.68), ಮತ್ತು ಮಧ್ಯಪ್ರದೇಶ (ಶೇ.42.09) ರಾಜ್ಯಗಳು ಕ್ರಮವಾಗಿ ನಂತರದ ಸ್ಥಾನವನ್ನು ಪಡೆದಿವೆ.
ಜೂನ್ 2025ರ ದತ್ತಾಂಶಗಳ ಪ್ರಕಾರ ಸುಮಾರು 8.61 ಕೋಟಿ ಮಕ್ಕಳು ಪೋಷಣ್ ಟ್ರ್ಯಾಕರ್ ನಲ್ಲಿ ನೋಂದಣಿ ಮಾಡಿದ್ದಾರೆ