ಕೋಲ್ಕತ್ತಾದ ಹಳದಿ ಟ್ಯಾಕ್ಸಿಗಳಿಗೆ ವಿದಾಯ

1950ರಲ್ಲಿ ಪ್ರಾರಂಭಗೊಂಡಿದ್ದ ಈ 'ಹಿಂದುಸ್ತಾನ್ ಅಂಬಾಸಿಡರ್‌' ಟ್ಯಾಕ್ಸಿಗಳು ನಂತರದ ದಿನಗಳಲ್ಲಿ ವಿನ್ಯಾಸದಲ್ಲಿ ಬದಲಾವಣೆ ಕಾಣಲೇ ಇಲ್ಲ.
ಕಳೆದ ವರ್ಷ, 7,000 ಕಾರುಗಳು ಚಾಲ್ತಿಯಲ್ಲಿದ್ದವು; ಆದರೆ, ಈ ವರ್ಷ ಕೇವಲ 2,500 ಕಾರುಗಳು ಸಕ್ರಿಯವಾಗಿವೆ.
ಈ ವರ್ಷದ ಕೊನೆಯವರೆಗೆ ಇನ್ನೂ 1,000 ಟ್ಯಾಕ್ಸಿಗಳು ವಿದಾಯ ಘೋಷಿಸಲಿವೆ.
ಕೋಲ್ಕತ್ತಾವನ್ನು ಹಿಂದುಸ್ತಾನ್ ಮೋಟಾರ್ಸ್ ಗಳ ರಾಜಧಾನಿ ಎಂದೇ ಕರೆಯಲಾಗುತ್ತದೆ
ಈ ಐತಿಹಾಸಿಕ ಕಾರುಗಳ ಕಣ್ಮರೆಯು ದೇಶದ ಕುಸಿಯುತ್ತಿರುವ ಆರ್ಥಿಕತೆಯ ಪ್ರತಿಬಿಂಬವಾಗಿದೆ ಎಂದ ಚಾಲಕರು