ಕೇರಳದ ಮಾಜಿ ಸಿಎಂ, ಸಿಪಿಎಂನ ಹಿರಿಯ ನಾಯಕ ಅಚ್ಯುತಾನಂದನ್ ನಿಧನ

ಶತಾಯುಷಿ ಕಮ್ಯುನಿಸ್ಟ್ ನಾಯಕ ಅಚ್ಯುತಾನಂದನ್ (1923-2025) ಸಾಮಾಜಿಕ ನ್ಯಾಯ ಮತ್ತು ಕಾರ್ಮಿಕರ ಹಕ್ಕುಗಳ ಹೋರಾಟಗಾರರಾಗಿದ್ದರು.
ಅಚ್ಯುತಾನಂದ್ ಅವರು ತಮ್ಮ ರಾಜಕೀಯ ಬದುಕಿನಲ್ಲಿ ಹತ್ತು ಚುನಾವಣೆಗಳನ್ನು ಎದುರಿಸಿದ್ದಾರೆ
ಮೂರು ಚುನಾವಣೆಗಳಲ್ಲಿ ಸೋತು, ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ
1980ರಿಂದ 1992ರವರೆಗೆ 12 ವರ್ಷಗಳ ಕಾಲ ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ
2016ರ ವಿಧಾನಸಭೆ ಚುನಾವಣೆಯಲ್ಲಿ ಅವರು ತಮ್ಮ 93ನೇ ಹಿರಿಯ ವಯಸ್ಸಿನಲ್ಲೂ 'ಎಡ ಪ್ರಜಾಸತ್ತಾತ್ಮಕ ರಂಗ' (LDF)ದ ಪರವಾಗಿ ಪ್ರಚಾರ ನಡೆಸಿ ಗಮನ ಸೆಳೆದಿದ್ದರು.