ಟಿವಿ ಧಾರಾವಾಹಿಗಾಗಿ ಹಲವು ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಿದ ಮಾಜಿ ಸಂಸದೆ ಸ್ಮೃತಿ ಇರಾನಿ

2000ರ ಪ್ರಸಿದ್ಧ ಟಿವಿ ಧಾರಾವಾಹಿಗಳಲ್ಲಿ ಒಂದಾಗಿದ್ದ 'ಕ್ಯೂಂ ಕಿ ಸಾಸ್ ಭೀ ಕಭಿ ಬಹು ಥಿ'
ಈ ಧಾರಾವಾಹಿಯಲ್ಲಿ ಮಾಜಿ ಸಂಸದೆ ಸ್ಮೃತಿ ಇರಾನಿ ಮುಖ್ಯ ಪಾತ್ರ ನಿರ್ವಹಿಸಿದ್ದರು
ಇತ್ತೀಚೆಗೆ ಮೆರೂನ್ ಸೀರೆಯಲ್ಲಿ ಸ್ಮೃತಿ ಇರಾನಿ ಕಾಣಿಸಿಕೊಂಡ ಫೋಟೊ ವೈರಲ್‌ ಆಗಿತ್ತು.
ನಿಮ್ಮೆಲ್ಲರನ್ನೂ ಮತ್ತೆ ಭೇಟಿಯಾಗುವ ಸಮಯ ಬಂದಿದೆ ಎಂದು ಸ್ಮೃತಿ ಇರಾನಿ ಪೋಸ್ಟ್‌ ಮಾಡಿದ್ದಾರೆ
'ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ' ಕೇವಲ ಒಂದು ಪಾತ್ರವಾಗಿರಲಿಲ್ಲ, ಬದಲಿಗೆ ಭಾವನೆಗಳು, ನೆನಪು ಎಲ್ಲವನ್ನೂ ಒಟ್ಟಿಗೆ ತೆರೆಮೇಲೆ ಕಟ್ಟಿಕೊಡುವ ವೇದಿಕೆಯಾಗಿತ್ತು ಎಂದ ಸ್ಮೃತಿ ಇರಾನಿ
2003ರಲ್ಲಿ ಅವರು ಬಿಜೆಪಿ ಪಕ್ಷ ಸೇರಿ ತಮ್ಮ ರಾಜಕೀಯ ಪಯಣವನ್ನು ಬೆಳೆಸಿದ್ದರು