ಪ್ರತಿ ಭಾರತೀಯರು ಫೋನಿನಲ್ಲಿ ಹೊಂದಿರಬೇಕಾದ ಸರಕಾರಿ ಆ್ಯಪ್ ಗಳು!

ದೀಕ್ಷ (Diksha) :
ಉತ್ತಮ ಕಲಿಕೆಯ ಅನುಭವಕ್ಕೆ ಅಗತ್ಯ. ಹಲವು ಭಾಷೆಗಳಲ್ಲಿ ಪಠ್ಯಪುಸ್ತಕಗಳು ಇಲ್ಲಿ ಲಭ್ಯವಿದೆ. ಪ್ರಗತಿಯನ್ನು ಟ್ರ್ಯಾಕ್ ಮಾಡಲು ಸಹಕಾರಿ.
ಸ್ವಯಂ (Swayam) :
9ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ಉಚಿತ ಆನ್‌ಲೈನ್ ಕೋರ್ಸ್‌ಗಳಲ್ಲಿ ದಾಖಲಾಗಲಾಗಬಹುದು. ಐಐಟಿ, ಐಐಎಂ ಮತ್ತು ಉನ್ನತ ವಿಶ್ವವಿದ್ಯಾಲಯಗಳಿಂದ ಪ್ರಮಾಣಪತ್ರಗಳನ್ನು ಗಳಿಸಲು ಇದು ಉತ್ತಮ ಆ್ಯಪ್.
112 India App :
ಲೊಕೇಶನ್ ಟ್ರ್ಯಾಕಿಂಗ್‌ ನೊಂದಿಗೆ ಪೊಲೀಸ್, ಅಗ್ನಿಶಾಮಕ, ಮತ್ತು ವೈದ್ಯಕೀಯ ನೆರವಿಗೆ 24×7 ತ್ವರಿತ ಸ್ಪಂದನೆ ಒದಗಿಸುವ ತುರ್ತು ಆ್ಯಪ್.
Mparivahan :
ನಿಮ್ಮ ವಾಹನಗಳ ಡಿಜಿಟಲ್ ದಾಖಲೆಗಳನ್ನು ನಿರ್ವಹಿಸುವುದು, ಚಲನ್ ಗಳನ್ನು ಪರಿಶೀಲಿಸುವುದು, ವಿಮೆ, ತೆರಿಗೆಗಳನ್ನು ಪರಿಶೀಲಿಸುವುದು, ಹತ್ತಿರದ ಆರ್‌.ಟಿ.ಒ ಗಳನ್ನು ಸುಲಭವಾಗಿ ಹುಡುಕಲು ಉತ್ತಮ ಆ್ಯಪ್.
BHIM UPI :
ಸುಲಭವಾಗಿ ನಗದುರಹಿತ ಪಾವತಿಗಳನ್ನು ಮಾಡಲು, ಹಣವನ್ನು ವರ್ಗಾಯಿಸಲು, ಬಿಲ್‌ ಗಳನ್ನು ಪಾವತಿಸಲು ಮತ್ತು ಬ್ಯಾಂಕ್ ವಿವರಗಳನ್ನು ಹಂಚಿಕೊಳ್ಳದೇ ಯುಪಿಐನೊಂದಿಗೆ ಶಾಪಿಂಗ್ ಮಾಡಲು ಉಪಯುಕ್ತಕರ ಆ್ಯಪ್.