ವಿನಾಶದ ಅಂಚಿನಿಂದ ಬದುಕುಳಿದ ಪ್ರಾಣಿ-ಪಕ್ಷಿಗಳ ವಿವರ ಇಲ್ಲಿದೆ…

ವಿನಾಶದ ಅಂಚಿನಲ್ಲಿದ್ದ ಏಷ್ಯಾಟಿಕ್ ಸಿಂಹಗಳು
ಏಷ್ಯಾಟಿಕ್ ಸಿಂಹಗಳು 19ನೇ ಶತಮಾನದಲ್ಲಿ ವಿನಾಶದ ಅಂಚಿಗೆ ತಲುಪಿದ್ದು, 20 ಸಿಂಹಗಳು ಮಾತ್ರ ಉಳಿದಿದ್ದವು. ಜುನಾಗಢ್ ನ ನವಾಬ್ ಮಧ್ಯಪ್ರವೇಶಿಸಿದ ಮೇಲೆ, ಸಿಂಹ ಯೋಜನೆ ಕೈಗೊಂಡು ಸಿಂಹಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂತು. ಇಂದು ಗಿರ್ ಅರಣ್ಯ ಪರಿಸರದಲ್ಲಿ 670 ಏಷ್ಯಾಟಿಕ್ ಸಿಂಹಗಳಿವೆ.
ಒಂದು ಕೊಂಬಿನ ಘೇಂಡಾಮೃಗ
ಒಂದು ಕೊಂಬಿನ ಘೇಂಡಾಮೃಗ ಅಥವಾ ಖಡ್ಗಮೃಗ 1905ರಲ್ಲಿ 75ರ ಸಂಖ್ಯೆಗೆ ಇಳಿದು ಅಳಿವಿನಂಚಿಗೆ ಹೋಗಿತ್ತು. ಕಾಜಿರಂಗಾ ರಾಷ್ಟ್ರೀಯ ಅಭಯಾರಣ್ಯದ ನಿರ್ಮಾಣ ಮತ್ತು ಬೇಟೆಯ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡ ಮೇಲೆ ದೊಡ್ಡ ಬದಲಾವಣೆ ಕಂಡುಬಂತು. ಇಂದು ಕಾಜಿರಂಗದಲ್ಲಿ 2,400 ಖಡ್ಗಮೃಗಗಳಿವೆ.
ಅಮುರ್ ಗಿಡುಗ
ಪ್ರತಿ ವರ್ಷ ನಾಗಾಲ್ಯಾಂಡ್ ಗೆ ಲಕ್ಷಾಂತರ ಅಮುರ್ ಗಿಡುಗಗಳು ಹಾದು ಬರುತ್ತವೆ. ಆದರೆ ದಶಕಗಳ ಹಿಂದೆ ವಲಸೆ ಪಕ್ಷಿಗಳ ಸಾಮೂಹಿಕ ಬೇಟೆಯಿಂದಾಗಿ ಅವುಗಳ ಉಳಿವಿಗೆ ಕಂಟಕ ಬಂದಿತ್ತು. 2012ರಲ್ಲಿ ಸಾಮುದಾಯಿಕ ಒಪ್ಪಂದಗಳು, ಕಠಿಣ ಶಿಕ್ಷೆ, ಜಾಗೃತಿ ಅಭಿಯಾನದ ಮೂಲಕ ತ್ವರಿತ ಕ್ರಮ ಕೈಗೊಳ್ಳಲಾಯಿತು.ಇಂದು ನಾಗಾಲ್ಯಾಂಡ್ ಜಗತ್ತಿನ ಅಮುರ್ ಗಿಡುಗದ ರಾಜಧಾನಿ ಎಂದೇ ಪ್ರಸಿದ್ಧಿ ಪಡೆದಿದೆ.
ಆಲಿವ್ ರಿಡ್ಲೇ ಆಮೆ
ಒಡಿಶಾದ ಕರಾವಳಿಯಲ್ಲಿ ಮುಖ್ಯವಾಗಿ ಗಾಹಿರ್ಮಾತ ಮತ್ತು ರುಶಿಕುಲ್ಯ ಕಡಲ ತೀರಗಳು ಜಗತ್ತಿನಲ್ಲೇ ಆಲಿವ್ ರಿಡ್ಲೇ ಆಮೆಗಳ ಸಾಮೂಹಿಕ ಸಂತಾನೋತ್ಪತ್ತಿ ಜಾಗಗಳಾಗಿವೆ. 1980 ಮತ್ತು 1990ರಲ್ಲಿ ಮೊಟ್ಟೆ ಕದಿಯುವ ಪ್ರವೃತ್ತಿಯಿಂದ ಇದರ ಸಂತತಿ ವಿನಾಶದಂಚಿಗೆ ತಲುಪಿತ್ತು. ಇದೀಗ ಈ ಪ್ರದೇಶ ಜಾಗತಿಕವಾಗಿ ಆಲಿವ್ ರಿಡ್ಲೇಗಳ ಅತಿ ದೊಡ್ಡ ಆವಾಸಸ್ಥಾನವಾಗಿದೆ.
ಬರಸಿಂಘ
ಮಧ್ಯಪ್ರದೇಶದ ಪ್ರಾಣಿಯಾಗಿರುವ ಬರಸಿಂಘಗಳು ಒಂದು ಕಾಲದಲ್ಲಿ ಅಳಿವಿನಂಚಿಗೆ ತಲುಪಿದ್ದವು. 1960ರಲ್ಲಿ ಕನ್ಹಾ ರಾಷ್ಟ್ರೀಯ ಉದ್ಯಾನವನದಲ್ಲಿ 60 ಬರಸಿಂಘಗಳು ಮಾತ್ರ ಉಳಿದಿದ್ದವು. ಆವಾಸಸ್ಥಾನದ ರಕ್ಷಣೆ, ಭೇಟೆಗೆ ತಡೆಯೊಡ್ಡಿರುವುದು, ಪ್ರಭೇದಗಳನ್ನು ಜಾಗರೂಕವಾಗಿ ಸಂರಕ್ಷಿಸಿರುವುದು ಅವುಗಳ ಸಂಖ್ಯೆ 800ಕ್ಕೆ ಏರಲು ಕಾರಣವಾಗಿದೆ.